ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದ ಗ್ರಾಮ ದೈವಕ್ಕೆ ಸಂಬಂಧಪಟ್ಟಂತೆ 1001 ಗಣಗಳಿಗೆ “ವನಭೊಜನ ” ಕಾರ್ಯಕ್ರಮ ನಡೆಯಿತು.


ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಮಾಣಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆಯ ಮೊದಲು ಮಾಣಿ ಗ್ರಾಮದ ಉಳ್ಳಾಲ್ತಿ  ದೇವಸ್ಥಾನದ ವಠಾರದಲ್ಲಿ ಹಾಗೂ ಅರೆಬೆಟ್ಟುವಿನಲ್ಲಿ ಒಂದೇ ದಿನ ವನಭೊಜನ ಕಾರ್ಯಕ್ರಮ ನಡೆಯುತ್ತದೆ.
ಅರೆಬೆಟ್ಟು ಗುತ್ತುವಿನಲ್ಲಿ ವರ್ಷಂಪ್ರತಿ ಯಂತೆ ಜರಗುವ ಕಂಬಳಕೋರಿಯಂದು ಈ ಎರಡು ಗ್ರಾಮದ ವನಭೋಜನಕ್ಕೆ ದಿನ ನಿಗದಿಯಾಗುತ್ತದೆ.
ಅ ಪ್ರಕಾರ ಒಂದೇ ದಿನ ಎರಡು ಕಡೆಗಳಲ್ಲೂ ವನಭೋಜನಕ್ಕೆ ಮೀಸಲಿರಿಸಿದ ಜಾಗದಲ್ಲಿ ಮಾಣಿಗುತ್ತು ಮತ್ತು ಅರೆಬೆಟ್ಟು ಗುತ್ತುವಿನ ಮುಖ್ಯಸ್ಥರ ಮುಂದಾಳತ್ವದಲ್ಲಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಜರಗುತ್ತದೆ.


ವನಭೋಜನ ಎಂದರೆ ಏನು:
ದಿನನಿಗದಿಯಂತೆ ಗ್ರಾಮದ ಭಕ್ತರು ದೈವದ ಗಣಗಳಿಗೆ ಹರಕೆಯ ರೂಪದಲ್ಲಿ ಅಗೆಲು ಸೇವೆ ನೀಡುವುದು ಇದರ ಉದ್ದೇಶ.
ಅ ದಿನದಂದು ಊರಿನ ಭಕ್ತರು ಹರಕೆಯ ರೂಪದಲ್ಲಿ ಕೋಳಿ, ಒಣ ಮೀನು, ಅಕ್ಕಿ, ತೆಂಗಿನಕಾಯಿ, ಹುರುಳಿ, ಇತ್ಯಾದಿಗಳನ್ನು ಹರಕೆಗೆಂದು ನೀಡುತ್ತಾರೆ .
ಕಾಡಿನ ಮದ್ಯದಲ್ಲಿ ಭಕ್ತರು ಹರಕೆಯ ರೂಪದಲ್ಲಿ ನೀಡಿದ ವಸ್ತುಗಳನ್ನು ಅಲ್ಲೇ ತಯಾರಿಸಿ ಅಗೆಲು ರೂಪದಲ್ಲಿ ದೈವದ ಗಣಗಳಿಗೆ ಬಡಿಸಲಾಗುತ್ತದೆ. ಬಳಿಕ ಗ್ರಾಮಸ್ಥರು ಒಟ್ಟಿಗೆ ಪ್ರಸಾದದ ರೂಪದಲ್ಲಿ ಪಡೆದುಕೊಂಡು ಅಲ್ಲೇ ಕುಳಿತು ಊಟ ಮಾಡುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here