ಮಂಗಳೂರು: ಕರಾವಳಿಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ತಮಿಳುನಾಡಿನಲ್ಲಿ ಗ್ಯಾಂಗ್ ಸ್ಟಾರ್ ಗಳು ತಪ್ಪಿಸಿಕೊಂಡಿರುವ ಬೆನ್ನಲ್ಲಿ ಅಲರ್ಟ್ ಮಾಡಿದೆ. ಭಯೋತ್ಪಾದಕರ ಜೊತೆ ನಂಟಿದ್ದ ಗ್ಯಾಂಗ್ ಸ್ಟಾರ್ ಗಳು ತಮಿಳುನಾಡಿನಿಂದ ತಪ್ಪಿಸಿಕೊಂಡಿದ್ದು, ಮಂಗಳೂರು ಕಡೆಗೆ ಆಗಮಿಸಿರಬಹುದು ಎಂಬ ಅನುಮಾನಗಳಿವೆ. ಆದ್ದರಿಂದ ಕರಾವಳಿಯಾದ್ಯಂತ ಹೈ ಅಲರ್ಟ್ ಮಾಡಲಾಗಿದೆ.ಇನ್ನು ಈ ಗ್ಯಾಂಗ್ ಸ್ಟಾರ್ ಗಳು ಕೇರಳ ಮೂಲಕ ಮಂಗಳೂರು ಕಡೆ ಆಗಮಿಸುತ್ತಿರುವ ಮಾಹಿತಿ ಸಿಕ್ಕಿದೆ. ಹಾಗಾಗಿ ಕೇರಳದ ಹಲವು ಭಾಗಗಳಲ್ಲಿಯೂ ಈಗ ಹೈ ಅಲರ್ಟ್ ಮಾಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ದೊರಕಿದ್ದು, ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿ, ಪುತ್ತೂರು ಸುತ್ತಮುತ್ತ ಹೆಚ್ಚಿನ ಭದ್ರತೆ ಮಾಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here