ಬಂಟ್ವಾಳ: ಸಂಚಾರ ಪೊಲೀಸ್ ಠಾಣೆ ಉಪವಿಭಾಗ ಬಂಟ್ವಾಳ ವತಿಯಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮ ಬಿಸಿರೋಡಿನಲ್ಲಿ ನಡೆಯಿತು.
ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರು ಶಾಲಾ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ರಸ್ತೆ ಅಪಘಾತದಲ್ಲಿ ದಿನವೊಂದಕ್ಕೆ ಸುಮಾರು ಜನರು ಮೃತಪಡುವುದನ್ನು ಗಮನಿಸಿದ ಸರಕಾರ, ಇಲಾಖೆ ಮತ್ತು ನ್ಯಾಯಾಲಯ ಅಪಘಾತಗಳಿಂದ ಸಾವು ನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಜೊತೆಗೆ ಅನೇಕ ಯೋಜನೆಗಳನ್ನು ಕೂಡಾ ಜಾರಿ ಮಾಡಿದೆ. ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ರಸ್ತೆ ಸುರಕ್ಷತಾ ಕಾರ್ಯಕ್ರಮ ಒಂದು ವಾರಗಳ ಕಾಲ ನಡೆಯಲಿದ್ದು, ಎಲ್ಲರ ಸಹಕಾರ ಬೇಕಾಗಿದೆ ಎಂದು ಹೇಳಿದರು.


ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ನಗರ ಠಾಣಾ ಎಸ್. ಐ.ಅವಿನಾಶ್ ,
ಸಂಚಾರಿ ಟ್ರಾಫಿಕ್ ಎಸ್.ಐ.ರಾಮ ನಾಯ್ಕ, ಸೈಬರ್ ಕ್ರೈಮ್ ವಿಭಾಗದ ಮುಖ್ಯಸ್ಥ ಮುಖೇಶ್ ಹಾಗೂ ಸಿಬ್ಬಂದಿಗಳು, ಟೂರಿಸ್ಟ್ ಕಾರು ಚಾಲಕ ಮಾಲಕರು, ಅಟೋ ಮಾಲಕ ಚಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ‌
ಎ.ಎಸ್.ಐ. ಬಾಲಕೃಷ್ಣ ಸ್ವಾಗತಿಸಿ, ಟ್ರಾಫಿಕ್ ಸಿಬ್ಬಂದಿ ಪ್ರಶಾಂತ್ ವಂದಿಸಿದರು. ಸಿಬ್ಬಂದಿ ವಿವೇಕ್ ಕಾರ್ಯಕ್ರಮ ನಿರೂಪಿಸಿದರು. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here