ವಿಟ್ಲ: ಶ್ರೀದೇವಿ ಪ್ರೌಢಶಾಲೆ ದೇವಿನಗರದ ಜ್ಞಾನಭಾರತಿ ಸಭಾಂಗಣದಲ್ಲಿ ಅಂಚೆ ಇಲಾಖೆ ಪುತ್ತೂರು ಮತ್ತು ಯುವ ವೃಂದ ದೇವಿನಗರ ಇದರ ಸಹಯೋಗದಲ್ಲಿ ಆಧಾರ್ ಕಾರ್ಡಿನ ತಿದ್ದುಪಡಿ ಮತ್ತು ಸೇರ್ಪಡೆಗೊಳಿಸುವ ಕಾರ್ಯಕ್ರಮವು ಜರುಗಿತು.
ಆಧಾರ್ ಕಾರ್ಡಿನಲ್ಲಿರುವ ಲೋಪದೋಷಗಳ ಸರಿಪಡಿಸುವಿಕೆ ಮತ್ತು ಸೇರ್ಪಡೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಅಂಚೆ ಇಲಾಖೆಯ ಲೋಕನಾಥ ತಿಳಿಸಿದರು. ಗ್ರಾಮ ವಿಕಾಸ ಸಂಯೋಜಕ ರಾಮಕೃಷ್ಣ. ಬಿ ಮೂಡಂಬೈಲು ಮಾತನಾಡಿ ಅಂಚೆ ಇಲಾಖೆ ಮತ್ತು ಯುವ ವೃಂದ ದೇವಿನಗರ ಇದರ ಸಂಘಟಕರ ಜನಪರ ಕಾಳಜಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀದೇವಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಜನಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್, ಯುವ ವೃಂದ ಸಂಘಟನೆಯ ಅಧ್ಯಕ್ಷ ದಿನೇಶ ಬುಡಲೆ ಉಪಸ್ಥಿತರಿದ್ದರು. ಯುವ ವೃಂದ ಸಂಘಟನೆಯ ಪ್ರಮುಖರಾದ ಪ್ರವೀಣ ದೇವಿನಗರ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಜೇಯ ಶಾಸ್ತ್ರಿ ವಂದಿಸಿದರು. ಸುಮಾರು 123 ಜನ ಫಲಾನುಭವಿಗಳು ಆಧಾರ್ ನೊಂದಾವಣೆ ಮತ್ತು ತಿದ್ದುಪಡಿಯ ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here