


ಬಂಟ್ವಾಳ: ಬಾಕಿಲದ ನೆಲ ಪುಣ್ಯ ಭೂಮಿಯಾಗಿದ್ದು, ದೈವ ದೇವರ ಕೃಪೆಯೇ ಸಕಲ ಕಾರ್ಯಗಳಿಗೆ ಪ್ರೇರಣೆಯಾಗಿ ನಿಂತಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು. ಅನಂತಾಡಿ ಗ್ರಾಮದ ಬಾಕಿಲ ಗುತ್ತಿನ ಉಳ್ಳಾಲ್ತಿ ಮೂಲಸ್ಥಾನ, ಹೊಸಮ್ಮ, ವೈದ್ಯನಾಥ, ಅಣ್ಣಪ್ಪ ಪಂಜುರ್ಲಿ ಮತ್ತು ಬೆರ್ಮೆರ್ ಬೈದೇರುಗಳ ಗರಡಿಯಲ್ಲಿ ಜ.26 ರಿಂದ ಫೆ.5 ರವರೆಗೆ ನಡೆಯಲಿರುವ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ದೈವಗಳ ನೇಮೋತ್ಸವದ ಪೂರ್ವಭಾವಿಯಾಗಿ ಬುಧವಾರ ಬೆಳಿಗ್ಗೆ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು. ಆರ್ಥಿಕವಾಗಿ ಶಕ್ತಿ ಇಲ್ಲದ ಕುಟುಂಬಕ್ಕೆ ದೈವ ದೇವರುಗಳೇ ಪ್ರೇರಣೆಯಾಗಿ ನಿಂತಿದ್ದಾರೆ, ಈ ಪುಣ್ಯ ಕಾರ್ಯದ ಯಶಸ್ಸಿಗೆ ಸರ್ವರೂ ನೆರವಾಗುವಂತೆ ಅವರು ಮನವಿ ಮಾಡಿದರು. ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಗ್ರಾ.ಪಂ.ಅಧ್ಯಕ್ಷ ಸನತ್ ಕುಮಾರ್ ರೈ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಬ್ರಹ್ಮಕಲಶ ಸಮಿತಿ ಸಂಚಾಲಕ ರುಕ್ಮಯ ಪೂಜಾರಿ, ಆಡಳಿತ ಟ್ರಸ್ಟಿನ ಅಧ್ಯಕ್ಷ ವಸಂತ ಪೂಜಾರಿ ಮಂಗಳೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಬಾಕಿಲ ಗುತ್ತು, ಖಜಾಂಜಿ ಹರೀಶ್ ಸಾಲ್ಯಾನ್ ಮಂಗಳೂರು, ಜತೆ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು, ಟ್ರಸ್ಟಿಗಳಾದ ಜನಾರ್ದನ ಪೂಜಾರಿ, ಮೋನಪ್ಪ ಪೂಜಾರಿ, ಚಪ್ಬರ ಸಮಿತಿ ಸಂಚಾಲಕ ಗಂಗಾಧರ ಪೂಜಾರಿ, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಕೆ.ಟಿ.ಸುವರ್ಣ, ನಾರಾಯಣ ಸಾಲಿಯಾನ್, ಬಾಕಿಲ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.





