ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಅವರು ಬಂಧಿಸಿದ್ದಾರೆ.
ಬಂಟ್ವಾಳ ಸಜೀಪನಡು ಗ್ರಾಮದ
ಕಂಚಿನಡ್ಕ ಪದವು ನಿವಾಸಿ , ಶೇಖಬ್ಬ ಅವರ ಪುತ್ರ
ಸಿದ್ದಿಕ್ ಯಾನೆ ಅಬೂಬಕ್ಕರ್ ಸಿದ್ದಿಕ್( 32 ) , ಎಂಬಾತ ಬಂಧಿತ ಆರೋಪಿ.
ಬಂಧಿತನಿಂದ 5,000/- ರೂ ಮೌಲ್ಯದ
350 ಗ್ರಾಂ ತೂಕದ ನಿಷೇದಿತ ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.‌
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಅವರು ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿರುವ ವೇಳೆ ವ್ಯಕ್ತಿಯೊಬ್ಬನು ಬ್ಯಾಗ್ ಹಿಡಿದುಕೊಂಡು ಕಂಚಿನಡ್ಕ ಪದವಿನ ಅಂಬೆಡ್ಕರ್ ಭವನದ ಬಳಿ ಹೋಗುತ್ತಿದ್ದ. ಆತ ಗಸ್ತಿನಲ್ಲಿರುವ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 5 ಸಾವುರ ರೂ ಮೌಲ್ಯದ 350 ಗ್ರಾಂ ತೂಕದ ನಿಷೇದಿತ ಗಾಂಜಾ ಇರುವುದು ಕಂಡು ಬಂದಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬಂಟ್ವಾಳ ಡಿ.ವೈ.ಎಸ್.ಪಿ. ವೈಲೆಂಟೆನ್ ಡಿ`ಸೋಜಾ ರವರ ಮಾರ್ಗದರ್ಶನದಂತೆ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ರವರ ನಿರ್ಧೇಶನದಲ್ಲಿ ಗ್ರಾಮಾಂತರ ಎಸ್.ಐ. ಪ್ರಸನ್ನ ಅವರವ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ, ಸಿಬ್ಬಂದಿಗಳಾದ ಎ.ಎಸ್.ಐ ಕಲೈಮಾರ್, ಹೆಚ್.ಸಿ ಸುರೇಶ್, ಜನಾರ್ಧನ, ಕಿರಣ್, ಪಿ.ಸಿ ಮನೋಜ್ ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here