Wednesday, October 25, 2023

ಪೌರತ್ವ ತಿದ್ದುಪಡಿ ಕಾಯ್ದೆ: ಮಾಹಿತಿ ಕಾರ್ಯಾಗಾರ

Must read

ಉಜಿರೆ: ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗದಿದ್ದರೆ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯ ಅವಶ್ಯಕತೆಯೇ ಇಲ್ಲ. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಶೋಷಣೆಗೊಳಗಾಗಿ, ಬದುಕಿರುವುದಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಭಾರತೀಯ ಪೌರತ್ವ ಅಗತ್ಯವಾಗಿದೆ ಎಂದು ಬಂಟ್ವಾಳದ ರಾಮದಾಸ್ ಹೇಳಿದರು.

ಗುರುವಾಯನಕೆರೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಬಗ್ಗೆ ಬಿ.ಜೆ.ಪಿ. ಬೆಳ್ತಂಗಡಿ ಮಂಡಲ ಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಸೋಮವಾರ ಅವರು ಕಾಯ್ದೆ ಬಗ್ಗೆ ಸವಿವರ ಮಾಹಿತಿ ನೀಡಿದರು.
ಒಳ ನುಸುಳುವಿಕೆಯನ್ನು ತಡೆಗಟ್ಟುವುದು ಪ್ರತಿದೇಶದ ಜವಾಬ್ದಾರಿ. ದೇಶದೊಳಗೆ ಬಂದವರಿಗೆಲ್ಲರಿಗೂ ಪೌರತ್ವ ಕೊಡುವುದು ಯಾವ ದೇಶಕ್ಕೂ ಸಾಧ್ಯವಿಲ್ಲ. ಧರ್ಮದ ಆಧಾರದಲ್ಲಿ ಅಂದು ಕಾಂಗ್ರೇಸ್‌ ದೇಶ ವಿಭಜನೆ ಮಾಡದಿದ್ದರೆ ಈ ಕಾಯ್ದೆಯ ಅಗತ್ಯವೇ ಇರಲಿಲ್ಲ. ಸುಳ್ಳು ಸುದ್ದಿ ಪಸರಿಸಿ ವಿರೋಧ ಪಕ್ಷಗಳು ಮಾಡುತ್ತಿರುವ ವೋಟು ಬ್ಯಾಂಕ್‌ ರಾಜಕಾರಣವೇ ಅಲ್ಲಲ್ಲಿ ಪ್ರತಿಭಟನೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿ.ಜೆ.ಪಿ.ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಯ್ದೆಯ ಅವಶ್ಯಕತೆಯನ್ನು ವಿವರಿಸಿದರು.
ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಶಾರದಾ ರೈ, ಮಮತಾ ಎಂ.ಶೆಟ್ಟಿ, ಚಂದ್ರಕಲಾ ಸಿ.ಕೆ. ಮತ್ತು ಧನಲಕ್ಷ್ಮೀ ಜನಾರ್ದನ್ ಉಪಸ್ಥಿತರಿದ್ದರು.
ಸೀತಾರಾಮ ಬಿ.ಎಸ್. ಸ್ವಾಗತಿಸಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

More articles

Latest article