ಕಾಸರಗೋಡು: ಕರಾವಳಿಯಲ್ಲಿ ಮತ್ತೆ ಶುರುವಾಯ್ತು ಲವ್ ಜಿಹಾದ್. ಯುವತಿಯೊರ್ವರನ್ನು ಸ್ನೇಹದ ನೆಪದಲ್ಲಿ ಮತ್ತು ಬರಿಸುವ ಪಾನೀಯ ನೀಡಿ ಮುಸ್ಲಿಂ ಯುವಕ ಅತ್ಯಾಚಾರ ನಡೆಸಿ ಚಿತ್ರೀಕರಿಸಿದ್ದು, ಈ ವೀಡಿಯೊ ತೋರಿಸಿ ಬೆದರಿಸಿ ಹೆತ್ತವರು ಹಾಗೂ ಯುವತಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರ್ ಎಂಬ ಗ್ರಾಮದಲ್ಲಿ ನಡೆದಿದೆ.

ಯುವತಿ ಕಾಸರಗೋಡಿನಲ್ಲಿ ದೂರು ನೀಡಿದ್ದರೂ ಕೇರಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಯುವಕರು ಅತ್ಯಾಚಾರ ನಡೆಸಿರುವುದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಎಂಬ ಕಾರಣಕ್ಕಾಗಿ ಕೇರಳ ಪೊಲೀಸರು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ಅತ್ಯಾಚಾರವೆಸಗಿ ಮತಾಂತರಕ್ಕೆ ಬಲತ್ಕಾರಗೊಳಿಸಿದ ಯುವಕರು ಬೆಂಗಳೂರಿನಲ್ಲಿ ನೆಲೆಸಿರುವ ಕಾರಣದಿಂದ ಯುವತಿಯು ತನ್ನ ದೂರನ್ನು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್ ರಿಗೆ ನೀಡಿ ಅತ್ಯಾಚಾರವೆಸಗಿರುವ ಯುವಕರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಲತ್ಕಾರಗೊಳಿಸಿದ್ದಾರೆ ಅವರಿಗೆ ತಕ್ಕ ಶಿಕ್ಷೆ ನೀಡುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾಳೆ.
ಈ ವಿಷಯವಾಗಿ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದಾರೆ. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಸರಗೋಡು ಮೂಲದ ಯುವತಿಯನ್ನು ಕೇರಳ ಮೂಲದ ಯುವಕರು ಬಲವಂತವಾಗಿ ಮದ್ಯ ಕುಡಿಸಿ, ಆಕೆಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಆತ್ಯಾಚಾರ ಮಾಡಿ, ಅದರ ವಿಡಿಯೋ ಮಾಡಿಟ್ಟುಕೊಂಡಿರುವ ಯುವಕರು, ಆಕೆಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಅತ್ಯಾಚಾರಗೊಂಡ ಆ ಯುವತಿಗೆ, ನೀನು ಹಾಗೂ ನಿಮ್ಮ ಮನೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳು ಮುಸ್ಲೀಂ ಧರ್ಮಕ್ಕೆ ಮತಾಂತರಗೊಳ್ಳಬೇಕು. ನಿನ್ನ ತಂದೆಯನ್ನು ಬಿಟ್ಟು ಎಲ್ಲಾ ಹೆಣ್ಣು ಮಕ್ಕಳು ಇಸ್ಲಾಂಗೆ ಮತಾಂತರವಾಗಬೇಕು. ಮತಾಂತರಗೊಂಡರೆ ತೊಂದರೆ ಕೊಡುವುದಿಲ್ಲ. ಇದು ಸಾಧ್ಯವಾಗದೇ ಇದ್ದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದರಿಂದ ಕಂಗಾಲಾದ ಯುವತಿ ಹಾಗೂ ಆಕೆಯ ತಾಯಿ ತಮ್ಮ ಬಳಿಗೆ ಬಂದು ದು:ಖ ತೋಡಿಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಹಾಗೂ ಆಕೆಯ ಕುಟುಂಬಸ್ಥರು ಕಾಸರಗೋಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಮುಂದಾದರೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ಅದೂ ಅಲ್ಲದೇ ಯುವತಿ ಮೇಲೆ ಅತ್ಯಾಚಾರವೆಸಗಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವ ಯುವಕರು ಬೆಂಗಳೂರಿನಲ್ಲಿ ವಾಸವಾಗಿರುವ ಹಿನ್ನೆಲೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದು, ಕೃತ್ಯದ ಹಿಂದಿನ ಜಾಲ ಬೇಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಂಸದೆ ಶೋಭಾ ಆಗ್ರಹಿಸಿದ್ದಾರೆ.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here