ಫೆ.24ರಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿ ನೇಮೋತ್ಸವಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಕ್ಷೇತ್ರದ ಪ್ರಮುಖರು ಸೋಮವಾರ ಭೇಟಿ ಮಾಡಿ ಮಾರ್ಗದರ್ಶನ ಪಡೆದರು. ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡುವಂತೆ ಈ ಸಂದರ್ಭ ಕ್ಷೇತ್ರದ ವತಿಯಿಂದ ಆಹ್ವಾನಿಸಲಾಯಿತು.

ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ, ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆಯವರ ನೇತೃತ್ವದ ತಂಡ ಡಾ. ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.
ಐನೂರು ವರ್ಷಗಳ ಹಿಂದೆ ಕೋಟಿ ಚೆನ್ನಯರು, ಮಾತೆ ದೇಯಿ ಬೈದ್ಯೆತಿ. ಗುರು ಸಾಯನ ಬೈದ್ಯರು ಬಾಳಿ ಬೆಳಗಿದ ಮೂಲಸ್ಥಾನ ಗೆಜ್ಜೆಗಿರಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಪುನರುತ್ಥಾನ ಯೋಜನೆಯ ಬಗ್ಗೆ ಡಾ. ಹೆಗ್ಗಡೆಯವರು ಸಮಗ್ರ ಮಾಹಿತಿ ಪಡೆದುಕೊಂಡರು. ಮೂಲಸ್ಥಾನ ಗರಡಿ, ಸತ್ಯಧರ್ಮ ಚಾವಡಿಯ ಹಿನ್ನೆಲೆ, ಯೋಜನೆಯ ಪ್ರಗತಿಯ ಬಗ್ಗೆ ಶ್ಲಾಘಿಸಿದ ಅವರು ಬ್ರಹ್ಮಕಲಶೋತ್ಸವ ರೂಪುರೇಷೆಗಳ ಬಗ್ಗೆಯೂ ಚರ್ಚಿಸಿ, ಮಾರ್ಗದರ್ಶನ ನೀಡಿದರು.
ಫೆ.೨೯ರಂದು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಗವಹಿ ಆಶೀರ್ವಚನ ನೀಡುವಂತೆ ಈ ಸಂದರ್ಭ ಡಾ. ಹೆಗ್ಗಡೆಯವರಲ್ಲಿ ಮನವಿ ಮಾಡಲಾಯಿತು. ಡಾ.ಹೆಗ್ಗಡೆಯವರು ಸಮ್ಮತಿಸಿ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅಭಯ ಕ್ಷೇತ್ರದ ಮೇಲಿರಲಿ ಎಂದು ಹರಸಿದರು.
ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷರಾದ ರಾಜು ಪೂಜಾರಿ ಕಾಶಿಪಟ್ಣ, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಕೆ.ವಸಂತ ಸಾಲಿಯಾನ್ ಕಾಪಿನಡ್ಕ, ಕ್ಷೇತ್ರಾಡಳಿತ ಸಮಿತಿಯ ಕಾರ್ಯಕಾರಿ ಸದಸ್ಯರಾದ ಸಂತೋಷ್ ಕುಮಾರ್ ಕೊಟ್ಟಿಂಜ, ಆಂತರಿಕ ಲೆಕ್ಕಪರಿಶೋಧಕ ಶೇಖರ್ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ಗೆಜ್ಜೆಗಿರಿ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಸೋಮನಾಥ ಬಂಗೇರ ವರ್ಪಾಳೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ, ಬ್ರಹ್ಮಕಲಶೋತ್ಸವ ಸ್ವಯಂ ಸೇವಕ ಸಮಿತಿಯ ಸಂಚಾಲಕರಾದ ನಾರಾಯಣ ಮಚ್ಚಿನ, ಧರ್ಮಸ್ಥಳ ವಲಯ ಪ್ರಧಾನ ಸಂಚಾಲಕರಾದ ಪುರುಷೋತ್ತಮ ಮೂಡಂಗಲ್ಲು, ಸಂಚಾಲಕರಾದ ಪ್ರಭಾಕರ ಧರ್ಮಸ್ಥಳ ಉಪಸ್ಥಿತರಿದ್ದರು. ಇದೇ ವೇಳೆ ಧರ್ಮಸ್ಥಳ ಡಿ. ಹಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here