

ಬಂಟ್ವಾಳ: ಬಂಟ್ವಾಳ ತಾ. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ಸಂಭವ್ ಫೌಂಡೇಶನ್ ಪುತ್ತೂರು, ಐ ಮಿತ್ರ ಸುರತ್ಕಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗ ಇದರ ಸಹಕಾರದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಮಿತ್ರ ಮಂಡಳಿ ಸಭಾಂಗಣದಲ್ಲಿ ಜ.4 ರಂದು ನಡೆಯಿತು.
ಉದ್ಯಮಿ ರಾಮಚಂದ್ರ ಪ್ರಭು ಅವರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೆ.ಮೋನಪ್ಪ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಗೌರವಾಧ್ಯಕ್ಷ ಎಚ್. ಮೋಹನ್ ಸಾಲ್ಯಾನ್, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ್ಶೆಟ್ಟಿ, ಗೌರವಾಧ್ಯಕ್ಷೆ ಅಮೃತಾ ಎಸ್., ಸಂಭವ್ ಫೌಂಡೇಶನ್ನ ಮೆನೇಜರ್ ಹೇಮಚಂದ್ರ, ಮಿತ್ರ ಮಂಡಳಿ ಮತ್ತು ವನಿತಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಲಹೆಗಾರ ರಾಜೇಂದ್ರ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 147 ಮಂದಿ ಪ್ರಯೋಜನ ಪಡೆದುಕೊಂಡರು. 48 ಮಂದಿಗೆ ಉಚಿತ ಕನ್ನಡಕ ನೀಡಲಾಯಿತು. 30 ಮಂದಿಗೆ ಪೊರೆ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಯಿತು.








