ಬಂಟ್ವಾಳ: ಭಕ್ತಿಯ ಜೊತೆ ಶಕ್ತಿಯನ್ನು ಹೊಂದಿರುವ ಗೋಳ್ತಮಜಲು ಗಣೇಶ್ ಮಂದಿರ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಮಾದರಿಯಾಗಲಿ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಭಟ್ ಅವರು ಹೇಳಿದರು.
ಅವರು ಶ್ರೀ ಗಣೇಶ ಮಂದಿರ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ, ಶ್ರೀ ಗಣೇಶ್ ಗೆಳೆಯರ ಬಳಗ ಗಣೇಶ ನಗರ ಗೊಳ್ತಮಜಲು ಇದರ ಆಶ್ರಯದಲ್ಲಿ ಗೋಳ್ತಮಜಲು ಗಣೇಶ ಮಂದಿರದ ಕ್ರೀಡಾಂಗಣದಲ್ಲಿ ಮಂದಿರಕ್ಕೆ ಸ್ಥಳ ಖರೀದಿಸುವ ಉದ್ದೇಶದಿಂದ ನಡೆದ ತಾಲೂಕು ಮಟ್ಟದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸತ್ಯನಾರಾಯಣ ಪೂಜೆ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಪಡೆದಿರುವ ಜಿಲ್ಲೆಯ ಮಣ್ಣಿನ ಕ್ರೀಡೆಯಾದ ಕಬಡ್ಡಿ ಆಟದ ಮೂಲಕ ಯುವಕರನ್ನು  ಒಗ್ಗೂಡಿಸಿ ಸಮಾಜದ ರಕ್ಷಣೆಗೆ ಪಣತೊಟ್ಟಿರುವ ಈ ಸಂಘಟನೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿ. ಪುನರ್ಜನ್ಮದ ನಂಬಿಕೆ ಇರುವ ಹಿಂದೂ ಧರ್ಮದಲ್ಲಿ ಸತ್ತರೆ ಬದುಕುವ ಆಟ ಇದ್ದರೆ ಅದು ಕಬಡ್ಡಿ ಮಾತ್ರ. ಹೀಗೆ  ಭಾರತೀಯ ಸಂಸ್ಕೃತಿಯನ್ನು ಮೇಳೈಸಿಕೊಂಡ ಶಕ್ತಿಯ ಯುಕ್ತಿಯ ಆಟ ಕಬಡ್ಡಿ ಆಟ. ಆಟದಲ್ಲಿ ದ್ವೇಷ ನಿರ್ಮಾಣ ಮಾಡದೆ ಸ್ಪರ್ಧೆಯ ಕಡೆ ಶಕ್ತಿಯನ್ನು ಸಂಪೂರ್ಣ ತೊಡಗಿಸಿಕೊಂಡು ಆಟ ಆಡಬೇಕಾಗಿದೆ, ಎಲ್ಲರಿಗೂ ಕಬಡ್ಡಿ ಆಟ ಪ್ರೇರಣೆಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸಂಘಟನೆಯ ಮೂಲಕ ಶಕ್ತಿಯುತವಾಗಿ, ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡಿ, ಕ್ರೀಡೆಯ ಮೂಲಕ ಯುವಕರನ್ನು ಒಗ್ಗೂಡಿಸಿ ಎಂದು ಹೇಳಿದರು.
ಗಣೇಶ್ ಮಂದಿರದ ಗೌರವಾಧ್ಯಕ್ಷ ತೋಟ ಶ್ಯಾಂ ಭಟ್, ಸರ್ವೇಶ್ವರಿ ಗೋಪಾಲಕೃಷ್ಣ ಭಟ್, ವಕೀಲ ಶಂಭು ಶರ್ಮ, ರಾಜ್ಯ ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಶರಣ್ ಪಂಪ್ ವೆಲ್ , ಪ್ರದೀಪ್ ಪಂಪ್ ವೆಲ್, ವಕೀಲ ಪ್ರಸಾದ್ ಕುಮಾರ್ ರೈ, ಸಂಚಾಲಕ ಕೃಷ್ಣಪ್ಪ ಪೂಜಾರಿ ತೋಟ, ಅಶೋಕ ಕುಮಾರ್ ಕೊಳಕೀರು, ಸುಂದರ ಆಳ್ವ, ಸುಂದರ ಶೆಟ್ಟಿ ಗೋಳ್ತಮಜಲು, ನಾರಾಯಣ ಪೂಜಾರಿ ಹೊಸಮನೆ, ಕೃಷ್ಣಪ್ಪ ಆಚಾರ್ಯ ಕಲ್ಲಡ್ಕ, ರತ್ನಾಕರ ಶೆಟ್ಟಿ ಕಲ್ಲಡ್ಕ, ಗುರು ಬಂಟ್ವಾಳ, ಚರಣ್ ವಿಟ್ಲ, ರಾಧಾಕೃಷ್ಣ ಅಡ್ಯಾಂತಯ, ಶಂಕರ್ ಮಾಸ್ಟರ್, ಕೃಷ್ಣ ವಕೀಲ ,ಮಾಜಿ ಲೋಹಿತ್ ಪನೋಲಿಬೈಲು, ಪ್ರವೀಣ್ ಉಡುಪಿ, ತಾ.ಪಂ.ಸದಸ್ಯ ಮಹಾಬಲ ಆಳ್ವ, ಸುಧಾಕರ ರೈ ಬೋಳಂತರು, ಅಕ್ಷಯ ರಜಪೂತ್, ಪದ್ಮ ನಾಭ ಕಟ್ಟೆ, ಮುರಳಿಕೃಷ್ಣ ಹಸಂತಡ್ಕ, ಶ್ರೀದರ್ ತೆಂಕಿಲ, ದಿನೇಶ್ ಅಮ್ಟೂರು, ಶಿವಾನಂದ ಮೆಂಡನ್,  ಮಿಥುನ್ ಪೂಜಾರಿ, ತಿಲಕ್ ರಾಜ್,  ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸೈನಿಕರಾದ ಶಿವಪ್ರಕಾಶ್ ಮತ್ತು ಆನಂದ ಬಿ. ಹಾಗೂ ವಕೀಲರಾದ ಶಂಭು ಶರ್ಮ ಮತ್ತು ಪ್ರಸಾದ್ ಕುಮಾರ್ ರೈ, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ಬಿ‌ . ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಾದ ರಚಿತಾ ಎಂ.ಎನ್., ವಿದ್ಯಾ ಎ., ಜನಿತ್, ನಿಶ್ಮಿತಾ, ದೀಕ್ಷಾ, ಪರೀಕ್ಷಿತ್, ನಿರೀಕ್ಷಾ ಏಳು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗಣೇಶ್ ಮಂದಿರದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಟೈಲರ್ ಸ್ವಾಗತಿಸಿ, ಮಂದಿರದ ಖಜಾಂಚಿ ಮೋನಪ್ಪ ದೇವಶ್ಯ ವಂದಿಸಿದರು.
ಸಂಪತ್ ಕುಮಾರ್ ಗೋಪಾಲ ಬಲ್ಯಾಯ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here