ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ವತಿಯಿಂದ 14ನೇ ಹಣಕಾಸು ಯೋಜನೆಯಡಿಯಲ್ಲಿ ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನ ಆವರಣದಲ್ಲಿ 1.25 ಲಕ್ಷದಲ್ಲಿ ನಿರ್ಮಿಸಲಾದ ಸೋಲಾರ್ ಹೈಮಾಸ್ಟ್ ದೀಪವನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಕಪ್ಪ ಶೇಖ ಉದ್ಘಾಟಿಸಿದರು.
ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಪಂಚಾಯಿತಿ 14ನೇ ಹಣಕಾಸು ಅನುದಾನಕ್ಕಾಗಿ 1.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಶ್ರೀ ಶಂಕರನಾರಾಯಣ ದೇವಸ್ಥಾನ ಅರ್ಚಕ ನರಸಿಂಹ ಕಾರಂತ ಎರುಂಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಪಂಚಾಯತ್ ಸದಸ್ಯರಾದ ಜಗದೀಶ ಶೆಟ್ಟಿ ಮುಳಿಯಗುತ್ತು, ಮೋನಪ್ಪ ಎರುಂಬು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ, ಪ್ರಭಾಕರ ಶೆಟ್ಟಿ ದಂಬೆಕಾನ, ಸೀತಾರಾಮ ಶೆಟ್ಟಿ ಮುಳಿಯ, ಗೋಪಾಲ ಮಣಿಯಾಣಿ, ಆನಂದ ಶೆಟ್ಟಿ ತಾಳಿಪಡ್ಪು, ರಮೇಶ್ ನಾಯ್ಕ ನೆಗಳಗುಳಿ, ಗಿರೀಶ್ ಗೌಡ, ನೇಮು ಮೂಲ್ಯ, ಡಾ. ಬಿ.ಎನ್. ಮಹಾಲಿಂಗ ಭಟ್, ಗೋಪಾಲಕೃಷ್ಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here