

ಬೆಳ್ತಂಗಡಿ: ಪಂ. ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 2020-2023ರ ಜಿಲ್ಲಾಧ್ಯಕ್ಷರಾಗಿ ಬೆಳ್ತಂಗಡಿಯ ಮಡಂತ್ಯಾರು ಗ್ರಾ.ಪಂ.ನ ಪಿಡಿಒ ನಾಗೇಶ್ ಎಂ. ಆಯ್ಕೆಯಾಗಿದ್ದಾರೆ. ಹಳೆಯಂಗಡಿ ಪಿಡಿಒ ಪೂರ್ಣಿಮಾ (ಉಪಾಧ್ಯಕ್ಷೆ), ನಿಡ್ಲೆ ಗ್ರಾ.ಪಂ.ನ ಪಿಡಿಒ ಗಾಯತ್ರಿ ಪಿ.(ಸಂಘಟನ ಕಾರ್ಯದರ್ಶಿ), ಶಿವಾನಂದ ಪೂಜಾರಿ( ಉಪಾಧ್ಯಕ್ಷ), ಯಶವಂತ ಬೆಳ್ಚಡ (ಸಂಘಟನಾ ಕಾರ್ಯದರ್ಶಿ), ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ (ಕ್ರೀಡಾ ಕಾರ್ಯದರ್ಶಿ), ಪೂರ್ಣಿಮಾ ಜೆ. (ಸಾಂಸ್ಕೃತಿಕ ಕಾರ್ಯದರ್ಶಿ), ಶಂಭು ಕುಮಾರ ಶರ್ಮಾ (ಖಾಜಾಂಜಿ), ವಿಶ್ವನಾಥ ಬಿ. (ರಾಜ್ಯ ಪರಿಷತ್ ಸದಸ್ಯ) ಆಯ್ಕೆಯಾಗಿದ್ದಾರೆ.








