ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಇದರ ಬಗ್ಗೆ ಜನ ಜಾಗೃತಿ ಅಭಿಯಾನದ ಕಾರ್ಯಗಾರ ಬಿ.ಸಿ.ರೋಡಿನ ಬಿ.ಜೆ.ಪಿ ಕಛೇರಿಯಲ್ಲಿ ಜರುಗಿತು.

ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾರ್ಯಗಾರ ಉದ್ಗಾಟಿಸಿ ಮಾತನಾಡಿ, ಪೌರತ್ವ ಕಾಯ್ದೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಾಲಾಡಿಸಿ ಈ ದೇಶದ ನಾಗರಿಕರಿಗೆ ವಾಸ್ತವ ಅಂಶಗಳನ್ನು ತಿಳಿಸಲು ಬಿ.ಜೆ.ಪಿ ಕಾರ್ಯಕರ್ತರು ಕಟಿಬದ್ಧರಾಗಬೇಕಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಹಿತಿ ನೀಡುತ್ತಾ ಇದು ಯಾವುದೇ ಧರ್ಮದಾರಿಕ ಕಾನೂನು ಅಲ್ಲ ಇದರಿಂದ ಭಾರತದ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆ ಆಗುವುದಿಲ್ಲ. ಇದು ಯಾರಿಂದಲೂ ಪೌರತ್ವ ಕಿತ್ತು ಕೊಳ್ಳುವ ಕಾನೂನು ಅಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು ಆಗಿದೆ ಎಂದು ತಿಳಿಸಿದರು.

ರಾಜ್ಯ ಸಹವಕ್ತಾರೆ ಸುಲೋಚನ ಜಿ.ಕೆ ಭಟ್ ಅವರು ಜನ ಜಾಗೃತಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರದ ಅಧ್ಯಕ್ಷ ಬಿ. ದೇವದಾಸದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರದ ಉಪಾಧ್ಯಕ್ಷ ವಿಜಯ ರೈ ಅಜ್ಜಿಬೆಟ್ಟು, ಕ್ಷೇತ್ರದ ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಲಕ್ಷ್ಮೀ ಗೋಪಾಲಾಚಾರ್ಯ, ಹಾಗೂ ಪಂಚಾಯತ್ ಸಮಿತಿಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಪ್ರಾಸ್ತವಿಕ ಮಾತನಾಡಿ, ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here