ಬಂಟ್ವಾಳ: ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿಯರನ್ನು ಪ್ರತಿನಿತ್ಯ ಚುಡಾಯಿಸುತ್ತಿದ್ದು, ಶನಿವಾರವು ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಾಲೇಜಿನಲ್ಲಿ ಗುತ್ತಿಗೆ ಯಾಧಾರದಲ್ಲಿ ಕೂಲಿ ಕೆಲಸ ನಿರ್ವಹಿಸುವ ಉಜಿರೆಯ ರೋಹಿತ್ ಈ ಕೃತ್ಯ ವೆಸಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರತಿದಿನ ಕಾಲೇಜಿನ ಮೆಟ್ಟಲಿನಲ್ಲಿ ನಿಂತು ವಿದ್ಯಾರ್ಥಿನಿಯರಿಗೆ ಚುಡಾಯಿಸುತ್ತಿದ್ದು, ಶನಿವಾರವು ವಿದ್ಯಾರ್ಥಿನಿಯೊಬ್ಬಳ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಲೆತ್ನಿಸಿದಾಗ ಅಲ್ಲಿದ್ದ ವಿದ್ಯಾರ್ಥಿನಿಯರೆಲ್ಲರು ಜಮಾಯಿಸಿ ಈತನಿಗೆ ಥಳಿಸಲು ಮುಂದಾದಾಗ ಅಲ್ಲಿದ್ದ ಕಾಲೇಜಿನ ಸಿಬಂದಿಗಳು ಮಧ್ಯ ಪ್ರವೇಶಿಸಿದರೆನ್ನಲಾಗಿದೆ. ಈ ಸಂದರ್ಭ ರೋಹಿತನ ಅಸಭ್ಯ ವರ್ತನೆಯಿಂದ ಆಕ್ರೋಶಿತರಾದ ವಿದ್ಯಾರ್ಥಿನಿಯರು ಅತನ ಮೇಲೆ ಕಲ್ಲಿನ ದಾಳಿಗೂ ಯತ್ನಿಸಿದ್ದಾರೆ. ಬಳಿಕ ನೇರ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಸಮೂಹ ಠಾಣಾಧಿಕಾರಿಯವರಲ್ಲಿ ಅತನ ವಿರುದ್ದ ದೂರು ದಾಖಲಿಸಿದಲ್ಲದೆ, ಬಂಧನಕ್ಕೂ ಪಟ್ಟು ಹಿಡಿದು ಕುಳಿತ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ರೋಹಿತನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಈ ಕಾಲೇಜಿನಲ್ಲಿ ಒಂದಿಲ್ಲ ಒಂದು ವಿವಾದ ನಡೆಯುತ್ತಲೆ ಇದ್ದು, ಇತ್ತೀಚೆಗಷ್ಠೆ ಉಪನ್ಯಾಸಕನೊಬ್ಬನ ಮೇಲೂ ಇಂತಹದ್ದೆ ಆರೋಪ ವ್ಯಕ್ತವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿತ್ತು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here