

ಬಂಟ್ವಾಳ: ಎನ್.ಎಸ್.ಎಸ್ ಸಮಾಜಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ವಿದ್ಯೆ, ಬುದ್ಧಿ, ಶಿಸ್ತುಗಳ ಕಲಿಕೆಯೊಂದಿಗೆ ಪ್ರತಿಭಾ ವಿಕಾಸಕ್ಕೆ ಎನ್. ಎಸ್. ಎಸ್. ಪೂರಕವಾಗಿದೆ. ಇದರಿಂದಾಗಿ ವಾರ್ಷಿಕ ಶಿಬಿರಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ್ ಪೂಜಾರಿ ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ದ.ಕ ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಬೆಟ್ಟು ಅಮ್ಟಾಡಿ ಇಲ್ಲಿ ಆಯೋಜಿಸಿದ ವಾರ್ಷಿಕ ಶಿಬಿರದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ರೇಣುಕಾ ಕೆ. ಅವರ ಅಧ್ಯಕ್ಷತೆಯಲ್ಲಿ ವಸಂತ್ ಕಾರಂದೂರು, ಶಿವಭಕ್ತಿ ಯೋಗ ಸಂಘ ಮಂಗಳೂರು ಇದರ ಕಾರ್ಯದರ್ಶಿ ವೆಂಕಟೇಶ ಉದ್ಘಾಟನೆ ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ವಿಜಯ ಪ್ರಭು, ಕಿನ್ನಿಬೆಟ್ಟು ದ.ಕ ಜಿ. ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಿತಾ ಪ್ರಭು ಕುಟಿನ್ಹೊ, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ಕುಪ್ರಾಡಿ, ಶ್ರೀಮತಿ ಕೆಂಪುಗುಡ್ಡೆ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ, ಪ್ರಮುಖರಾದ ಕಮಲಾಕ್ಷ ಕೆಂಪುಗುಡ್ಡೆ, ವಿಶ್ವನಾಥ ಪೂಜಾರಿ ಕೆಂಪುಗುಡ್ಡೆ, ಘಟಕದ ನಾಯಕ ರಕ್ಷಿತ್ ಎಂ. ಸಾಲಿಯಾನ್ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಡಾ.ದಿನಕರ ಪಚ್ಚನಾಡಿ ಸ್ವಾಗತಿ, ಸಹಶಿಬಿರಾಧಿಕಾರಿ ಮಿಥುನ್ಚಂದ್ರ ವಂದಿಸಿದರು. ಘಟಕದ ನಾಯಕಿ ಕು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.








