Tuesday, October 17, 2023

ತಾಂಬೂಲ ಕಲಾವಿದೆರ್ ಕುಡ್ಲ ಅಭಿನಯದ “ಇಂಚಲಾ ಉಂಡಾ” ದ್ವೀತಿಯ ಸ್ಥಾನ

Must read

ಬಂಟ್ವಾಳ: ತಾಂಬೂಲ ಕಲಾವಿದರ್ ಪುಂಜಾಲಕಟ್ಟೆ, ಕುಡ್ಲ ಅಭಿನಯದ “ಇಂಚಲಾ ಉಂಡಾ” ತುಳು ಸಾಮಾಜಿಕ ಹಾಸ್ಯಮಯ ನಾಟಕ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದಿದೆ.
ಬಂಟ್ವಾಳದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ, ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಹತ್ತು ದಿನಗಳ ಕಾಲ ನಡೆದ ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ತಂಡಕ್ಕೆ ದ್ವೀತಿಯ ಸ್ಥಾನ ಲಭಿಸಿದೆ. ಇದರೊಂದಿಗೆ ವೈಯಕ್ತಿಕ ಬಹುಮಾನಗಳನ್ನು ಕೂಡ ಇವರ ತಂಡದ ಸದಸ್ಯರು ಪಡೆದುಕೊಂಡು ಗ್ರಾಮೀಣ ಪ್ರದೇಶದ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಟಕ ನಿರ್ದೇನಕ್ಕಾಗಿ ಪ್ರಥಮ ಬಹುಮಾನ ರಾಘವೇಂದ್ರ ಕಾರಂತ ಮೊಗರ್ನಾಡು, ಕಲರ್ಸ್ ಕನ್ನಡದ ಕಾಮಿಡಿ ಕಂಪೆನಿಯಲ್ಲಿ ಕಾಮಿಡಿ ಕಲಾವಿದನಾಗಿ ಮಿಂಚಿದ ಕಲಾವಿದ ಸಚಿನ್ ಅತ್ತಾಜೆ ಅವರಿಗೆ ಉತ್ತಮ ಹಾಸ್ಯನಟನಾಗಿ ಪ್ರಥಮ, ಉತ್ತಮ ಹಾಸ್ಯನಟಿಯಾಗಿ ಕಾವ್ಯ ನಾಕ್ ನಾಡ್ ಪ್ರಥಮ, ಉತ್ತಮ ನಟಿಯಾಗಿ ಸುರಕ್ಷಾ ಶೆಟ್ಟಿ ಪ್ರಥಮ, ಉತ್ತಮ ಖಳನಟನಾಗಿ ಮುರಳಿ ಅತ್ತಾಜೆ ದ್ವೀತಿಯ ಬಹುಮಾನ ಪಡೆದುಕೊಂಡಿದ್ದಾರೆ.
ಏಡ್ಸ್ ಬಗ್ಗೆ ಮಾಹಿತಿ ಜಾಗೃತಿ, ಮನುಷ್ಯ ಮನುಷ್ಯನ ಮಧ್ಯೆ ಹೋಲಿಸಿದಾಗ ಅಗುವ ಪರಿಣಾಮಗಳು, ಮಕ್ಕಳನ್ನು ಮನೆಯಲ್ಲಿ ಇಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬೆಳೆಸುತ್ತಿದ್ದೇವೆ, ಮಹಿಳೆಯರು ಟಿ.ವಿ. ಮಾಧ್ಯಮದ ಜೊತೆಯಲ್ಲಿ ಬ್ಯುಸಿಯಾಗಿದ್ದುಕೊಂಡು ಮಕ್ಕಳ ಲಾಲಲನೆ ಪಾಲನೆ ಬಗ್ಗೆ ಅಚ್ಚುಕಟ್ಟಾಗಿ ಮೂಡಿ ಬಂದ ಒಂದು ಉತ್ತಮ ನಾಟಕ ಇದಾಗಿದೆ.

More articles

Latest article