ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿಗೊಂಡು ವರ್ಗಾವಣೆಗೊಂಡ ಸಿಬ್ಬಂದಿಯವರಿಗೆ ಹಾಗೂ ವಯೋ ನಿವೃತ್ತಿಯಾದ ಭಾಸ್ಕರ್ ಅವರಿಗೆ ಮಂಗಳವಾರ ಪುಂಜಾಲಕಟ್ಟೆ ಪೊಲೀಸ್ ಠಾಣೆ ಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪುಂಜಾಲಕಟ್ಟೆ ಠಾಣೆಯಲ್ಲಿ ನಾಲ್ಕು ವರ್ಷಗಳ ಕಾಲ ಎಎಸ್ಐ ಆಗಿ ಕರ್ತವ್ಯ ಮಾಡಿ ವಯೋ ನಿವೃತ್ತಿ ಹೊಂದಿದ ಭಾಸ್ಕರ್, ವೇಣೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಗಿರಿಯಪ್ಪ, ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡ ದೇವಪ್ಪ, ಪದೋನ್ನತಿಗೊಂಡು ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಗಂಗಾಧರ್ ಮತ್ತು ಸುನಿತಾ, ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ದಿನೇಶ್ ಕುಮಾರ್, ಬೆಳ್ತಂಗಡಿ ಠಾಣೆಗೆ ವೃತ್ತ ನಿರೀಕ್ಷಕರ ಚಾಲಕರಾಗಿ ವರ್ಗಾವಣೆಗೊಂಡ ಆಸೀಪ್ ಅವರ ಬೀಳ್ಕೋಡುಗೆ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸೌಮ್ಯ ಜೆ. ಅವರು ವಹಿಸಿಕೊಂಡಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ಘನತೆ ಗೌರವ ಹೆಚ್ಚಿಸುವಲ್ಲಿ ಸಿಬ್ಬಂದಿಗಳ ಪಾತ್ರ ಬಹು ಮುಖ್ಯವಾದದ್ದು ಎಂಬುದನ್ನು ವಿವರಿಸಿ, ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪರಿಶ್ರಮ ಅತಿ ಅವಶ್ಯಕ ಎಂದು ಹೇಳಿ ಎಲ್ಲರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಂಚಾರ ಠಾಣೆಯ ಭಾರತಿ ಹಾಗು ವೇಣೂರು ಠಾಣೆಯ ಉಪನಿರೀಕ್ವಕ ಲೋಲಾಕ಼ೃ ಉಪಸ್ಥಿತಿತರಿದ್ದು ಶುಭ ಹಾರೈಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here