ಬಂಟ್ವಾಳ: ಅಮ್ಟೂರು ಶ್ರೀ ಕೃಷ್ಣ ಮಂದಿರ ಇದರ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕುಮಾರಿ ಅಶ್ವಿನಿ ಹೊಳ್ಳ ಅಮ್ಟೂರು ಇವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್, ಅರ್ಚಕ ಮೋಹನ್ ಆಚಾರ್ಯ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪುರುಷೋತ್ತಮ, ವೇಣುಗೋಪಾಲ, ದಿವಾಕರ ಪೂಜಾರಿ, ದಿನೇಶ್ ಅಮ್ಟೂರು, ಶರತ್ ಕುಮಾರ್, ಶಾಂಭವಿ ಎಸ್. ರಾವ್ ಮತ್ತು ಪ್ರಕಾಶ್ ಎಲ್. ಎಸ್. ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here