ಪುತ್ತೂರು: ನಗರ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂದಿಸಿದ ಆರೋಪಿಯನ್ನು 10 ವರ್ಷದ ಬಳಿಕ ಬಂಧಿಸಿದ್ದಾರೆ.

ಪುತ್ತೂರು ಸಮೀಪ ಪುರುಷಕಟ್ಟೆ ಎಂಬಲ್ಲಿ ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದ ,ಪುರುಷರಕಟ್ಟೆ ನಿವಾಸಿ ಪಿ .ಮೊಹಮ್ಮದ್ ಅವರ ಮಗ
3 ನೇ ಆರೋಪಿ ಅಬ್ಬಾಸ್ ಗೋಣಿ ಅಬ್ಬಾಸ್ ಅವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಇವರು ಪ್ರಕರಣವಾದ ನಂತರ ಬಂಧನವಾಗದೆ ಸುಮಾರು 10 ವರ್ಷದಿಂದ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯದಿಂದ ದಸ್ತಗಿರಿಗೆ LPC ವಾರಂಟ್ ಬರುತ್ತಿದ್ದು ದಸ್ತಗಿರಿಗೆ ಸಿಗದೇ ಇದ್ದುದರಿಂದ ಪತ್ತೆಗೆ ಮಾಹಿತಿಯನ್ನು ಸಂಗ್ರಾಹಿಸಿ ಡಿ.30ರಂದು ಆರೋಪಿಯನ್ನು ಬೆಂಗಳೂರಿನ ಆರ್ ಟಿ ನಗರದ ಆರೋಪಿಯ ಬಾಡಿಗೆ ಮನೆಯಿಂದ ವಶಕ್ಕೆ ಪಡೆದುಕೊಂಡು ಇಂದು ಡಿ. 31 ರಂದು ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಜ.13 ರವರೆಗೆ 14 ದಿನಗಳ ಕಾಲ ಕಾರಗೃಹ ಬಂಧನ ವಿಧಿಸಿರುತ್ತದೆ.
ಡಿ.ವೈ.ಎಸ್.ಪಿ.ದಿನಕರ ಶೆಟ್ಟಿ, ಮಾರ್ಗದರ್ಶನದಲ್ಲಿ , ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ನೇತ್ರತ್ವದಲ್ಲಿ ಪ್ರೋ.ಎಸ್.ಐ ಅನಿಲ್ ರೆಡ್ಡಿ, ಸಿಬ್ಬಂದಿಗಳಾದ ಪರಮೇಶ್ವರ, ಜಗದೀಶ್ ಮತ್ತು ಅನಿಲ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here