

ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಪೂಜ್ಯ ಸ್ವಾಮೀಜಿಯವರ ಶಿಷ್ಯ ಹಾಗೂ ಎಸ್.ಡಿ.ಎಂ.ಕಾಲೇಜಿನಲ್ಲಿ ಪೇಜಾವರ ಶ್ರೀಗಳು ಪರಂಧಾಮ ಹೊಂದಿದ ಬಗ್ಗೆ ಸಂಸ್ಕೃತ ಉಪನ್ಯಾಸಕ ರಾಮಚಂದ್ರ ಪುರೋಹಿತ ಮತ್ತು ಡಾ.ಶ್ರೀಧರ ಭಟ್ ನುಡಿನಮನ ಸಲ್ಲಿಸಿದರು.
ಪ್ರಾಧ್ಯಾಪಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪೂಜ್ಯ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಉಜಿರೆಯಲ್ಲಿರುವ ಕೆ.ಜಿ.ಯಿಂದ ಪಿ.ಜಿ. ವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಸೋಮವಾರ ರಜೆ ನೀಡಲಾಯಿತು.
ಧಾರವಾಡದಲ್ಲಿರುವ ಜನತಾ ಶಿಕ್ಷಣ ಸಮಿತಿಯ ಎಲ್ಲಾ ಸಂಸ್ಥೆಗಳಿಗೂ ಸೋಮವಾರ ರಜೆ ಸಾರಲಾಗಿದೆ ಎಂದು ಅಲ್ಲಿನ ಕಾರ್ಯದರ್ಶಿ ಡಾ. ನ. ವಜ್ರಕುಮಾರ್ ತಿಳಿಸಿದ್ದಾರೆ.
1973ರಲ್ಲಿ ಪೂಜ್ಯ ಪೇಜಾವರ ಸ್ವಾಮೀಜಿ ಸಲಹೆಯಂತೆ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದ ಜನತಾ ಶಿಕ್ಷಣ ಸಮಿತಿಯ ಆಡಳಿತವನ್ನು ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿಕೊಂಡು ಎಲ್ಲಾ ಸಂಸ್ಥೆಗಳಿಗೂ ಕಾಯಕಲ್ಪ ನೀಡಿದ್ದಾರೆ.







