ಬಂಟ್ವಾಳ: ಸಮ್ಮೇಳನಕ್ಕೆ ಬಳಸಿದ್ದ ತೆರೆದ ಜೀಪ್‌ವೊಂದು ಏಕಏಕಿ ಮುಂದಕ್ಕೆ ಚಲಿಸಿ ಆಳಕ್ಕೆ ಜಾರಿ ನಿಂತ ಘಟನೆ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದಿದೆ.
ಘಟನಾ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಏನಿದು ಘಟನೆ?:
ಮಾಣಿ ರಾಜ್‌ಕಮಲ್ ಅಡಿಟೋರಿಯಂನಿಂದ ಸಮ್ಮೇಳನದ ಸಭಾಂಗಣದವರೆಗೆ ಮೆರವಣಿಗೆಯ ಮೂಲಕ ಸಮ್ಮೇಳನಾಧ್ಯಕ್ಷೆ ಡಾ. ಧರಣೀದೇವಿ ಮಾಲಗತ್ತಿ ಅವರನ್ನು ಇದೇ ತೆರೆದ ಜೀಪಿನಲ್ಲಿ ಸಮ್ಮೇಳನ ಸಭಾಂಗಣಕ್ಕೆ ಕರೆತರಲಾಗಿತ್ತು. ಬಳಿಕ ಜೀಪ್‌ಅನ್ನು ಶಾಲಾ ಆವರಣದ ಇನ್ನೊಂದು ಬದಿಯಲ್ಲಿ ನಿಲ್ಲಿಸಲಾಗಿತ್ತು. ಆದರೆ, ಜೀಪ್‌ನಲ್ಲಿದ್ದ ಕೀಯನ್ನು ವ್ಯಕ್ತಿಯೊಬ್ಬರು ತಿರುಗಿಸಿದ ಪರಿಣಾಮ ಜೀಪ್ ಮುಂದಕ್ಕೆ ಏಕಿಏಕಿ ಮುಂದಕ್ಕೆ ಚಲಿಸಿ, ಏಕಾಏಕಿ ಆಳವಾದ ಪ್ರದೇಶಕ್ಕೆ ಜಾರಿ ಕೆಳಭಾಗದ ಮೆಟ್ಟಿಲಿನಲ್ಲಿ ಸಿಲುಕಿಕೊಂಡಿತ್ತು. ಘಟನೆಯಿಂದ ಜೀಪ್‌ಗೆ ಹಾನಿಯಾಗಿದೆ. ಬಳಿಕ ಜೀಪ್ ಅನ್ನು ಮೇಲೆತ್ತಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here