

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಮಂದಿರದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಮೇಳ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಸರಪಾಡಿ ಇದರ 7ನೇ ವರ್ಷದ ತಿರುಗಾಟಕ್ಕೆ ಡಿ.27 ರಂದು ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ಕ್ಷೇತ್ರದ ಪ್ರಧಾನ ತಂತ್ರಿ ಶಿವಪ್ರಸಾದ ಐತಾಳ ಅವರು ಶ್ರೀ ಕ್ಷೇತ್ರದ ಸನ್ನಿಽಯಲ್ಲಿ ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳದ ತಿರುಗಾಟವನ್ನು ಉದ್ಘಾಟಿಸಿದರು.
ಶ್ರೀ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ಹೊಳ್ಳಾರಗುತ್ತು, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಶಿವಪ್ಪ ಪೂಜಾರಿ ಹಟದಡ್ಕ, ರಾಧಾಕೃಷ್ಣ ರೈ ಕೊಟ್ಟುಂಜ, ಮೇಳದ ಸಂಚಾಲಕ ಪ್ರಶಾಂತ್ ಸಿ.ಕೆ., ಮೇಳದ ಪ್ರತಿನಿಧಿ ಶಶಿಧರ ಬಾಚಕೆರೆ, ಸುಂದರ ಬಾಚಕೆರೆ, ನಿರಂಜನ ಬಾಚಕೆರೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ದೇವರ ಪ್ರಥಮ ಸೇವೆಯಾಟವಾಗಿ ಪಾಂಡವಾಶ್ವಮೇಧ ಮತ್ತು ಸತ್ಯ ಚಂದನ ಯಕ್ಷಗಾನ ಬಯಲಾಟ ನಡೆಯಿತು.







