Thursday, October 26, 2023

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು: ವಾರ್ಷಿಕ ಕ್ರೀಡಾಕೂಟ

Must read

ಬಂಟ್ವಾಳ: ಕ್ರೀಡೆಯು ಯುವ ಮನಸ್ಸುಗಳಲ್ಲಿ ಸ್ವಾಭಿಮಾನ ಆತ್ಮಾಭಿಮಾನವನ್ನು ಬೆಳೆಯಲು ಸಹಕಾರಿ. ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಸದೃಢತೆಯು ವೃದ್ಧಿಸುವುದು ಹಾಗೂ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಂತಾಗಬೇಕು ಎಂದು ಪುತ್ತೂರು ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ಇದರ ಸಂಯೋಜಕ ಗೋವಿಂದರಾಜ ಶರ್ಮಾ ಅವರು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ಪ್ರತಾಪ ಕ್ರೀಡಾಸಂಘದ ವತಿಯಿಂದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಯಿತು. ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ಶ್ರೀರಾಮ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ್ ಇರಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಹಸಂಚಾಲಕ ರಮೇಶ್ ಎನ್. ವಹಿಸಿ ಸ್ಫರ್ಧಾಳುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ, ಕ್ರೀಡಾ ಸಂಘದ ನಿರ್ದೇಶಕಿ ಸುಶ್ಮಿತಾ, ವಾಣಿಜ್ಯ ಉಪನ್ಯಾಸಕಿ ಸುಕನ್ಯಾ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ಶಶಾಂಕ್, ಭರತ್‌ಕುಮಾರ್, ವಿಶ್ವನಾಥ, ಸುಚಿತ್ರಾ, ಶ್ರೀದೇವಿ ಅವರು ಕಲ್ಲಡ್ಕ ಶ್ರೀರಾಮ ಮಂದಿರದಿಂದ ಶ್ರೀರಾಮನ ಆಶೀರ್ವಾದ ಪಡೆದು ಕ್ರೀಡಾಜ್ಯೋತಿಯನ್ನು ತರಲಾಯಿತು. ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾ ಸ್ವೀಕಾರವನ್ನು ಕ್ರೀಡಾಸಂಘದ ಅಧ್ಯಕ್ಷ ಶಶಾಂಕ್ ವಾಚಿಸಿದರು. ಪ್ರತೀ ತಂಡದ ನಾಯಕರು ಅತಿಥಿಗಳಿಗೆ ತಂಡವನ್ನು ಪರಿಚಯಿಸಿದರು.

ಕಾರ್ಯಕ್ರಮವನ್ನು ಹಿತೇಶ್ ಪ್ರಥಮ ಬಿ.ಕಾಂ ಸ್ವಾಗತಿಸಿ, ರೇಶ್ಮಾ ಅಂತಿಮ ಬಿ.ಕಾಂ ವಂದಿಸಿದರು. ವರ್ಷಿತಾ ಅಂತಿಮ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.

More articles

Latest article