ಬಂಟ್ವಾಳ: ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಂಡು ಎತ್ತರಕ್ಕೆ ಬೆಳೆದವರು ಜಿ.ಆನಂದ ಎಂದು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಬಿಜೆಪಿ ಹಿರಿಯ ಕಾರ್ಯಕರ್ತ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆನಂದ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‌ಕಾರ್ಯಕರ್ತರಿಗೆ ಸಮಸ್ಯೆ ಅದಾಗ ಜೀವನವನ್ನು ಮುಡಿಪಾಗಿಟ್ಟು, ಸಾವಿರಾರು ಜನರಿಗೆ ಜಾಮೀನು ನೀಡಿದ ವ್ಯಕ್ತಿ. ಅಂತಹ ರಾಷ್ಟ್ರ ಸಂತ ಹಾಗಾಗಿ ಅವರಿಗೆ ಜಿ.ಆನಂದ ಎಂಬ ಹೆಸರು ಬಂದಿದೆ ಎಂದರು. ಕಾರ್ಯಕರ್ತರ ಜೊತೆ ಅತ್ಯಂತ ಮೃದು ಸ್ವಭಾವದ ಮೂಲಕ ಜನರಿಗೆ ಅರಳುವ ಹೂವಾಗಿದ್ದರು. ಅವರ ಹೆಜ್ಜೆ ಹಾಕಿದ ಸಹಕಾರಿ ಕ್ಷೇತ್ರ ಶೈಕ್ಷಣಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರವನ್ನು ಇನ್ನಷ್ಟು ಬೆಳೆಸುವ ಪ್ರಯತ್ನ ಮಾಡುವ ಎಂದು ಅವರು ಹೇಳಿದರು. ‌
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ನನಗೆ ರಾಜಕೀಯ ಹುಚ್ಚು ಹಿಡಿಸಿದವರು ಜಿ.ಆನಂದ ಅವರು ಎಂದು ಹೇಳಿದರು.
2013 ರ ವೇಳೆ ಇಡೀ ಬಂಟ್ವಾಳ ದ ಪರಿಚಯ ಮಾಡಿದ ವ್ಯಕ್ತಿ ಜಿ.ಆನಂದ ಅವರು. ನೀವು ಶಾಸಕನಾದ ಮೇಲೆ ನಾನು ಸಾಯುವುದು ಎಂಬ ಮಾತನ್ನು ಹೇಳಿದ ಆನಂದ ಅವರ ಸಾವು ಪಕ್ಷಕ್ಕೆ ಸಾಕಷ್ಟು ನಷ್ಟ ತಂದಿದೆ ಎಂದು ಅವರು ಹೇಳಿದರು.

ಯಾವುದೇ ರಾಜಕೀಯ ಹುದ್ದೆಯನ್ನು ಬಯಸದ, ಪಕ್ಷದ ಹಿತ ಕಾಯುವ ಪಕ್ಷದ ನಿಷ್ಠಾವಂತ ವ್ಯಕ್ತಿ ಎಂದು ಅವರು ಹೇಳಿದರು. ಅವರು ಹಾಕಿಕೊಟ್ಟ ಆದರ್ಶದ ಹಾದಿಯಲ್ಲಿ ನಾವು ಮುನ್ನುಡಿ ಇಡೋಣ ಎಂದು ಹೇಳಿದರು.


ರಾಜ್ಯಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಸಂಜೀವ ಮಠಂದೂರು, ಲಾಲಜಿ ಮೆಂಡನ್, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷೀ ಕೆ.ಪೂಜಾರಿ, ತುಂಗಪ್ಪ ಬಂಗೇರ, ಪದ್ಮಶೇಖರ್ ಜೈನ್, ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಬಿ.ರಮಾನಾಥ ರೈ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಶಕುಂತಲಾ ಶೆಟ್ಟಿ, ಗಣೇಶ್ ಕಾರ್ಣಿಕ್, ಪ್ರಮುಖರಾದ ಪ್ರಸಾದ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಬೃಜೇಶ್ ಚೌಟ, ಕಿಶೋರ್ ಕುಮಾರ್ ರೈ, ಪ್ರತಾಪ್ ಸಿಂಹ ನಾಯಕ್, ರಂದೀಪ್ ಕಾಂಚನ್, ನಮಿತಾ ಶ್ಯಾಮ್, ಉದಯಕುಮಾರ್ ರಾವ್, ಸುಲೋಚನಾ ಜಿ‌.ಕೆ ಭಟ್ ಗೋವಿಂದ ಪ್ರಭು, ದೇವದಾಸ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಶ್ರೀಕಾಂತ್ ಶೆಟ್ಟಿ, ತನಿಯಪ್ಪ ಮಡಿವಾಳ, ಸಮರ್ಥ .ಜಿ . ವೆಂಕಪ್ಪ ಪೂಜಾರಿ, ಬಾಲಕೃಷ್ಣ ಪೆರಾಜೆ, ಪುರಸಭಾ ಸದಸ್ಯರಾದ, ವಿದ್ಯಾವತಿ ಪ್ರಮೋದ್ ಕುಮಾರ್, ಹರಿಪ್ರಸಾದ್, ರಾಮಕೃಷ್ಣ ಆಳ್ವ, ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಬೇಬಿ ಕುಂದರ್, ಮೋನಪ್ಪ ಭಂಡಾರಿ, ರಾಜಾರಾಂ ಭಟ್, ವಜ್ರನಾಥ ಕಲ್ಲಡ್ಕ, ಯಶವಂತ ಪೊಳಲಿ, ರಾಮ್ ದಾಸ್ ಬಂಟ್ವಾಳ, ಜಿತೇಂದ್ರ ಕೊಟ್ಟಾರಿ, ಸಂದೇಶ್ ಶೆಟ್ಟಿ, ಬಂಟ್ವಾಳ ವ್ಯವಸಾಯ ಬ್ಯಾಂಕ್ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು, ಗ್ರಾ.ಪಂ.ಸದಸ್ಯರು, ಜಿ.ಆನಂದ ಅವರ ಕುಟುಂಬದ ಸದಸ್ಯರು ನುಡಿನಮನ ಕಾರ್ಯಕ್ರಮಕ್ಕೆ ಅಗಮಿಸಿ ಶೃದ್ದಾಂಜಲಿ ಅರ್ಪಿಸಿದರು.

,  ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here