ಬಂಟ್ವಾಳ : ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆಯ ಸಂಗಬೆಟ್ಟುನಲ್ಲಿರುವ , ಪಣಂಬೂರು ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಕ್ಕೆ ಕಳ್ಳರು ನುಗ್ಗಿದ್ದು, ದೇವಸ್ಥಾನದ ಒಳಗಿರುವ ಕಾಣಿಕೆ ಡಬ್ಬಿ ಕೊಂಡೊಯ್ದ ಘಟನೆ ಸಂಭವಿಸಿದೆ.

ಡಿ.25 ರ ಮಧ್ಯರಾತ್ರಿ 2.30 ವೇಳೆ ಘಟನೆ ಸಂಭವಿಸಿದ್ದು, ಕಳ್ಳರ ಚಲನ ವಲನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇಬ್ಬರು ವ್ಯಕ್ತಿಗಳು ದೇವಸ್ಥಾನ ಕ್ಕೆ ಒಳಗೆ ನುಗ್ಗಿದ ಚಿತ್ರ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾಗಿದೆ.

ಶ್ರೀ ವೀರಭದ್ರ ಹಾಗೂ ಮಹಾಮ್ಮಾಯಿ ದೇವಸ್ಥಾನದ ನವೀಕರಣ ಗೊಂಡು ಇತ್ತೀಚಿಗೆ ಪುನಃಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ನಡೆದಿತ್ತು.‌

ಕಳ್ಳರು ಶ್ರೀವೀರಭದ್ರ ದೇವಸ್ಥಾನ ದ ಬೀಗ ಮುರಿದು ದೇವಸ್ಥಾನದ ಒಳಹೊಕ್ಕು ಗರ್ಭಗುಡಿಯ ಒಳಹೊಕ್ಕಲು ಪ್ರ ಯತ್ನಿಸಿದ್ದಾರೆ. ಗರ್ಭಗುಡಿಯ ಒಳಗೆ ಹೋಗಲು ಸಾಧವಾಗದೆ ಬಳಿಕ ಕಾಣಿಕೆ ಡಬ್ಬಿ ಎಬ್ಬಿಸಿ ಹೊರಕ್ಕೆ ಕೊಂಡೊಯ್ದು ಹಣ ತೆಗೆದು ಡಬ್ಬಿಯನ್ನು ಬಿಸಾಡಿದ್ದಾರೆ.
ಮಹಮ್ಮಾಯಿ ದೇವಸ್ಥಾನದ ಹಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಅಲ್ಲೂ ಗರ್ಭಗುಡಿಗೆ ನುಗ್ಗಲು ಪ್ರವೇಶ ಮಾಡಿ ವಿಫಲರಾದ ಅವರು ಅಲ್ಲಿನ ದೊಡ್ಡ ಕಾಣಿಕೆ ಡಬ್ಬಿಯನ್ನು ಕೊಂಡು ಹೋಗಿದ್ದಾರೆ.
ಈ ಡಬ್ಬಿಯನ್ನು ವಾಹನದ ಮೂಲಕವೇ ಕೊಂಡುಹೋಗಿರಬಹುದು ಎಂದು ಅಂದಾಜಿಲಾಗಿದೆ.‌

ಬೆಳಗ್ಗೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಗುರಿಕಾರರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್..ಐ. ಪ್ರಸನ್ನ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here