

ಉಜಿರೆ: ಗುರುವಾರ ಸೂರ್ಯಗ್ರಹಣ ನಿಮಿತ್ತ ಧರ್ಮಸ್ಥಳದಲ್ಲಿ ಮಧ್ಯಾಹ್ನ 12 ಗಂಟೆ ನಂತರ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ ದೇವರ ದರ್ಶನ, ತುಲಾಭಾರ, ಅಭಿಷೇಕ ಮೊದಲಾದ ಸೇವೆಗಳು ನಡೆಯುವುದಿಲ್ಲ.
ಗುರುವಾರ ಬೆಳಿಗ್ಗೆ ಗಂಟೆ 8.05 ರಿಂದ ಗಂಟೆ 11.04 ರ ವರೆಗೆ ಕಂಕಣ ಸೂರ್ಯಗ್ರಹಣ ನಡೆಯಲಿದೆ. ಭಕ್ತಾದಿಗಳು ಇದನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.







