ಬಂಟ್ವಾಳ: ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಡಿ.24 ರಂದು ರಾತ್ರಿ ಚರ್ಚ್‌ ನಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಧರ್ಮಗುರು ಫಾ| ಫ್ರೆಡ್ರಿಕ್ ಮೊಂತೆರೊ, ಗುಲ್ಬರ್ಗ ಧರ್ಮ ಕ್ಷೇತ್ರದ ಧರ್ಮಗುರು ಫಾ| ನವೀನ್ ರಾಕ್ ಡಿಸೋಜ ಅವರು ದಿವ್ಯ ಬಲಿಪೂಜೆ ಸಹಿತ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ರಿಸ್‌ಮಸ್ ಕೇಕ್ ಅನ್ನು ಕತ್ತರಿಸಲಾಯಿತು. ಡಿಯಾಕಾನ್‌ನ ಬ್ರ| ಸಂದೀಪ್, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ಕಾರ್ಯದರ್ಶಿ ಮಡ್ತಿನಿ ಸಿಕ್ವೆರಾ , ಧರ್ಮ ಭಗಿನಿ ಸಿ| ಅರ್ಚನಾ, ಪ್ರಮುಖರಾದ ನವೀನ್ ಮೊರಾಸ್, ರೊನಾಲ್ಡ್ ವಾಲ್ಡರ್, ವಾಡೆಯ ಗುರಿಕಾರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here