


ಬಂಟ್ವಾಳ: ಸುಮಾರು 3.50 ಕೋಟಿ ವೆಚ್ಚದಲ್ಲಿ ನವೀಕರಣಗೊಂಡು ಜ.11 ರಿಂದ ಜ. 18 ರವರೆಗೆ ನಡೆಯಲಿರುವ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ದ ನವೀಕರಣ ಪುನಃ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಅಂಗವಾಗಿ ಊರಿನ ಭಕ್ತಾದಿಗಳು ಕರಸೇವೆ ಮಾಡುತ್ತಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸದಾನಂದ ನಾವೂರ ಅವರು ಮಾತನಾಡಿ, 5 ಗ್ರಾಮಗಳಿಗೆ ಸೇರಿದ ಈ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವಕ್ಕೆ ಐದು ಗ್ರಾಮಗಳ ಭಕ್ತಾದಿಗಳು ದಿನಂಪ್ರತಿ ನೂರಾರು ಜನರು ಕರಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ.
ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಡಿ. 22 ರಂದು ಚಪ್ಪರ ಮೂಹೂರ್ತ ನಡೆದಿದೆ. ಊರ ಪರಊರಿನ ಭಕ್ತಾದಿಗಳ ಸಹಕಾರದಿಂದ ಅದ್ದೂರಿಯಾಗಿ ನವೀಕರಣಗೊಳ್ಳುತ್ತಿದೆ ಎಂದು ಹೇಳಿದರು.
ಕರಸೇವೆಯಲ್ಲಿ ಗ್ರಾಮಸ್ಥರ ಜೊತೆಗೆ ಗ್ರಾಮ ಸಮಿತಿಗಳ ಮುಖ್ಯಸ್ಥರು, ಸದಸ್ಯರುಗಳು, ಬ್ರಹ್ಮಕಲಶೋತ್ಸವ ಸಮಿತಿ ಮುಖ್ಯಸ್ಥರು, ಸದಸ್ಯರುಗಳು, ಮಹಿಳಾ ಸಮಿತಿ ಸದಸ್ಯರು ಗಳು ಭಾಗಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.







