ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ನೀರಿಗೆ ಸಾಕಷ್ಟು ಮೂಲಗಳಿದ್ದು, ವ್ಯವಸ್ಥಿತವಾದ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ,ಯೋಜನಾ ರೂಪುರೇಷೆಗಳನ್ನು ಸಿದ್ದಪಡಿಸುವಾಗ ಮುಂದಾಲೋಚನೆ ಇರಲಿ ಎಂದು ಇಲಾಖಾ ವಿವಿಧ ಯೋಜನಾಧಿಕಾರಿಗಳಿಗೆ ಸೂಚಿಸಿದರು.  ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾದ ಬಳಿಕವೂ ನಿರಂತರವಾಗಿ ಬೋರ್ ವೆಲ್ ಕೊರೆಯುವ ಬೇಡಿಕೆಗಳು ಜಾಸ್ತಿಯಾಗುತ್ತಿರುವುದು ಖೇದಕರ ವಿಷಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬಿಸಿರೋಡಿನ ಎಸ್. ಜಿ.ಎಸ್.ವೈ ಸಭಾಂಗಣದಲ್ಲಿ ಕರೆದ ಪಿಡಿಒ, ಅಧಿಕಾರಿಗಳು, ಗಾ.ಪಂ.ಅಧ್ಯಕ್ಷ ರುಗಳ ವಿಶೇಷ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು.

ಮುಂದಿನ ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯ ಮೂಲಕವೇ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಅಗಬೇಕಾಗಿದೆ ಎಂದು ಅವರು ತಿಳಿಸಿದರು. ಕರ್ಪೆ ಗ್ರಾಮದಲ್ಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗುತ್ತಿದ್ದು, ಇದರ ಕಾಮಗಾರಿ ಮಾರ್ಚ್ ಒಳಗಡೆ ಪೂರ್ಣಗೊಳ್ಳುತ್ತದೆ . ಅ ಬಳಿಕ ಅಮ್ಟಾಡಿ ಭಾಗದ ಜನರಿಗೆ ನೀರು ಪೂರೈಸಲು ಸಾಧ್ಯ ವಾಗುತ್ತದೆ, ಮತ್ತು ಕುಡಿಯುವ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.


ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಬೋರ್ ವೆಲ್ ಗಳಿಗೆ ಸೋಲಾರ್ ಅಳವಡಿಸಿ ಮಾದರಿ ಗ್ರಾಮಗಳಾಗಿ, ಸ್ವಾವಲಂಬಿ ಗಳಾಗಬೇಕು. ಅ ಮೂಲಕ ಗ್ರಾಮ ಪಂಚಾಯತ್ ಗಳ ಖರ್ಚು ಕಡಿಮೆ ಮಾಡಿ, ಅ ಹಣವನ್ನು ಅಭಿವೃದ್ಧಿ ಗೆ ಬಳಸಿ ಎಂದು ಹೇಳಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಹೊರಗುಳಿದ ಗ್ರಾಮಗಳ ಆಧ್ಯತೆಯ ಮೇರೆಗೆ ಕುಡಿಯುವ ನೀರು ಒದಗಿಸುವ ಕಾರ್ಯ ಶೀಘ್ರವಾಗಿ ನಡೆಯಬೇಕು, ಅನುದಾನವನ್ನು ನೀಡುವ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಹೊಸ ಬೋರ್ ವೆಲ್ ಕೊರೆಯಲು ಅವಕಾಶ ನೀಡುವುದಿಲ್ಲ, ಬತ್ತಿಹೋದ ಕೊಳವೆ ಬಾವಿ ಗಳನ್ನು ಪುನಶ್ಚೇತನ ಮಾಡುವ ಮೂಲಕ ಕೊಳವೆ ಬಾವಿಗಳಿಗೆ ಮರುಜೀವ ನೀಡಬೇಕಾಗಿದೆ ಎಂದು ಶಾಸಕರು ತಿಳಿಸಿದರು.


ಬಂಟ್ವಾಳ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಲ್ಲಿನ ಸಮಸ್ಯೆ ಗೆ ಸಂಬಂಧಿಸಿದಂತೆ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷ ರುಗಳು ಹಾಗೂ ಪಿಡಿಒ ಗಳ ಸಭೆ ನಡೆಸುವಂತೆ , ಹಾಗೂ ಇದರಲ್ಲಾದ ಬೆಳವಣಿಗೆ ಗಳ ಬಗ್ಗೆ ವರದಿ ನೀಡುವಂತೆ ಶಾಸಕರು ಸೂಚಿಸಿದರು. ಪರಿಸ್ಥಿತಿ ಗೆ ಹೊಂದಿಕೊಂಡು ಹೋಗುವ ಜೊತೆಗೆ ನೀರಿನ ಬಳಕೆ ಮಿತವಾಗಿರಲಿ , ಸರಕಾರದ ಯೋಜನೆಗಳಿಗೆ ಕಾಯದೇ ಪ್ರತಿಯೊಬ್ಬರು ಮಳೆನೀರು ಕೊಯ್ಲು ಅಳವಡಿಸಿ , ಗ್ರಾ.ಪಂ.ಅಧ್ಯಕ್ಷರುಗಳು, ಹಾಗೂ ಪಿಡಿಒ , ಅಧಿಕಾರಿಗಳನ್ನು ಸೇರಿಸಿಕೊಂಡು ನುರಿತ ತಜ್ಞರಿಂದ ಮಳೆಕೊಯ್ಲು ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಲಾಗುವುದು ಎಂದು ಅವರು ಹೇಳಿದರು.

ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ನೀರಿನ ಕುರಿತು ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಬೇಕು ಎಂದು ಗ್ರಾ.ಪಂ.ಅಧ್ಯಕ್ಷ ರುಗಳು ಶಾಸಕರಲ್ಲಿ ಮನವಿ ಮಾಡಿದರು.
ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ, ಆದರೆ ಮೆಸ್ಕಾಂ ನ ವಿದ್ಯುತ್ ಪೂರೈಕೆ ಯ ಸಮಸ್ಯೆಯಿಂದ ಕುಡಿಯುವ ನೀರು ಸರಬರಾಜು ಮಾಡಲು ಅಸಾಧ್ಯವಾಗುತ್ತಿದೆ ಎಂದು ಗ್ರಾ.ಪಂ.ಅಧ್ಯಕ್ಷರು ಗಳು ಶಾಸಕರ ಗಮನಕ್ಕೆ ತಂದರು.
ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್ ಕುಡಿಯುವ ನೀರಿನ ಪೂರೈಕೆ ಮಾಡಲು ಮೆಸ್ಕಾಂ ಇಲಾಖೆ ಯಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಅಗಬಾರದು ಅನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.

ಪಂಜಿಕಲ್ಲು, ಅಮ್ಟಾಡಿ ಸಹಿತ ಅನೇಕ ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ , ಕಡಿಮೆ ಸಾಮರ್ಥ್ಯದ ಟಿ.ಸಿ.ಹಾಗೂ ವಿದ್ಯುತ್ ಕಡಿತದಿಂದ ಕುಡಿಯುವ ನೀರು ಸರಬರಾಜು ಮಾಡಲು ಅಸಾಧ್ಯವಾಗುತ್ತಿದೆ ಎಂದು ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಶಾಸಕರ ಗಮನಕ್ಕೆ ತಂದರು. ಇದರಿಂದಾಗಿ ಕುರಿಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ವಿಷಯ ತಿಳಿಸಿದರು. ಈ ಬಗ್ಗೆ ಮೆಸ್ಕಾಂ ಇಲಾಖೆಯವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಚೆನ್ನೈ ತ್ತೋಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಹತ್ತು ಟ್ಯಾಂಕ್ ಗಳಿದ್ದು, ಈ ಟ್ಯಾಂಕ್ ಗಳ ಪೈಕಿ 6 ಟ್ಯಾಂಕ್ ಗಳಿಗೆ ಮಾತ್ರ ನೀರು ಸರಬರಾಜು ಅಗುತ್ತಿದ್ದು, ಉಳಿದ ನಾಲ್ಕು ಟ್ಯಾಂಕ್ ಗಳಿಗೆ ನೀರು ತಲುಪುತ್ತಿಲ್ಲ, ಇದರಿಂದ ಕುಂಟಾಲಪಲ್ಕೆ ಸಹಿತ ವಿವಿಧ ಪ್ರದೇಶಗಳಿಗೆ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾ.ಪಂ.ಅಧ್ಯಕ್ಷ ಯತೀಶ್ ಎಂ‌.ಶೆಟ್ಟಿ ಸಭೆಯ ಗಮನ ಸೆಳೆದರು.

ಕನ್ಯಾನದಲ್ಲಿ ಅನೇಕ ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದರ ಪರಿಹಾರದ ಕೆಲಸ ಅಗಬೇಕಾಗಿದೆ ಎಂದು ಪಿಡಿಒ ಅಧಿಕಾರಿಗಳ ಗಮನಕ್ಕೆ ತಂದರು.
ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿ ಬತ್ತಿಹೋಗಿದ್ದು, ಇಲ್ಲಿ ಕುಡಿಯುವ ನೀರಿಗಾಗಿ ಖಾಸಗಿ ಬೋರ್ ವೆಲ್ ನ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದ ಅವರು ಕುಡಿಯುವ ನೀರಿನ ಪರಿತಪಿಸಲು ಹೊಸ ಬೋರ್ ವೆಲ್ ಕೊರೆಯುವಂತೆ ಪಂಜಿಕಲ್ಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಅವರು ಸಭೆಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಇ.ಒ.ರಾಜಣ್ಣ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here