ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಅಧೀನದ ದೇರಳಕಟ್ಟೆ  ಕೆ. ಯಸ್. ಹೆಗ್ಡೆ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರಿಗೆ ಕ್ಷೇಮ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಈ ಹೆಲ್ತ್ ಕಾರ್ಡ್ ಗೆ  ಡಿ. 28 ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.

ಕ್ಷೇಮ ಹೆಲ್ತ್ ಕಾರ್ಡ್ ಪಡೆಯುವ ವಿಧಾನ:

1.ಮಂಗಳೂರು ಪ್ರೆಸ್ ಕ್ಲಬ್ ಮ್ಯಾನೇಜರ್ ಅಭಿಷೇಕ್ ಅವರಿಂದ ಅರ್ಜಿ ಪಡೆದುಕೊಳ್ಳುವುದು.

2.ನಿಗದಿತ ನಮೂನೆಯಲ್ಲಿ  ಅರ್ಜಿ ತುಂಬುವುದು  .
3.ಅರ್ಜಿಯೊಂದಿಗೆ  ರೇಷನ್ ಕಾರ್ಡ್ ಜೆರಾಕ್ಸ್ ,ಆಧಾರ್ ಕಾರ್ಡ್ ಜೆರಾಕ್ಸ್  ಹಾಗೂ ಪತ್ರಕರ್ತರ ಸಂಘದ ಗುರುತಿನ ಚೀಟಿ, ಅರ್ಜಿ ಸಲ್ಲಿಸುವವರ ಎರಡು ಭಾವ ಚಿತ್ರ.
5. ಕ್ಷೇಮ ಹೆಲ್ತ್ ಕಾರ್ಡ್ ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕವಿರುವುದಿಲ್ಲ .

6.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮಾತ್ರ ಈ ಹೆಲ್ತ್ ಕಾರ್ಡ್ ಅನ್ವಯವಾಗುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here