

ಬಂಟ್ವಾಳ: ಗುಲಾಬಿ ಶೆಟ್ಟಿ ಎಜುಕೇಶನ್ ಮತ್ತು ಸರ್ವೀಸ್ ಟ್ರಸ್ಟ್, ದಿವೀಶ್ ಪ್ರೀ ಪ್ರೈಮರಿ ಆಂಗ್ಲ ಮಾಧ್ಯಮ ಸ್ಕೂಲ್ ತುಂಬೆ ಇದರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ವನ್ನು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿ ದರು.
ಈ ಸಂದರ್ಭದಲ್ಲಿ ಸ್ಕೂಲ್ ನ ಸಂಚಾಲಕಿ ಉಷಾಪ್ರಕಾಶ್ ಶೆಟ್ಟಿ, ಸುಕನ್ಯಾ ನಾಗೇಶ್ ಶೆಟ್ಟಿ,ಪ್ರಭಾವತಿದೇವದಾಸ ಶೆಟ್ಟಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಸ್ಕೂಲ್ ನಲ್ಲಿ ನಡೆಸಿದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಬಳಿಕ ಮಕ್ಕಳಿಂದ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳು ನಡೆದವು.








