ಬಂಟ್ವಾಳ: ಬ್ಯಾಟರಿ ಕಳವು ಮಾಡಿ ಪೊಲೀಸರ ಕಣ್ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಇಂದು ಮುಂಜಾನೆ
ಬಿಸಿರೋಡು ಕೈಕಂಬ ದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಡಬ ತಾಲೂಕಿನ ಕಂತೂರು ಗ್ರಾಮದ ಏರ್ಮಾಲ ಅಬ್ದುಲಾ ಅವರ ಪುತ್ರ ರಾಝಿಕ್ (24). ಎಂಬಾತ ಬಂಧಿತ ಆರೋಪಿ.
ಬಿಸಿರೋಡಿನ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಲಾದ ಬಸ್ ನ ಬ್ಯಾಟರಿ ಕಳವು ಮಾಡಿದ ಪ್ರಕರಣದಲ್ಲಿ ಈತ ಆರೋಪಿ ಯಾಗಿದ್ದು ಈತನನ್ನು ಮಂಗಳವಾರ ಬೆಳಿಗ್ಗೆ ಬಂಧಿಸಿಲಾಗಿದೆ.
ಬಂಧಿತನ ಕೈಯಿಂದ ಸುಮಾರು 25 ಸಾವಿರ ರೂ ಮೌಲ್ಯದ ಬ್ಯಾಟರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ಮುಂಜಾನೆ ರೌಂಡ್ಸ್ ನಲ್ಲಿದ್ದ ವೇಳೆ ಕೈಕಂಬ ಬಸ್ ನಿಲ್ದಾಣ ದಲ್ಲಿ ನಿಂತು ಕೊಂಡಿದ್ದ ಈತ ಇವರನ್ನು ನೋಡಿ ಓಡಲಾರಂಬಿಸಿದ. ಓಡಿಹೋದ ಈತನ ಬಗ್ಗೆ ಸಂಶಯಗೊಂಡ ಇವರ ತಂಡ ಈತನನ್ನು ಬಂಧಿಸಿ ವಿಚಾರಣೆ ನಡೆಸಿ ದಾಗ ಈತ ಬ್ಯಾಟರಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕಡಬ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಬೇರೆ ಪ್ರಕರಣಗಳು ದಾಖಲಾಗಿವೆ.
ಎ.ಎಸ್.ಪಿ.ಸೈದುಲು ಅಡಾವತ್ ಅವರ ಮಾರ್ಗದರ್ಶನ ದಲ್ಲಿ , ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ
ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್, ಪ್ರೋ.ಪಿ.ಎಸ್.ಐ.ಕುಮಾರ್, ಎ.ಎಸ್.ಐ.ಸಂಜೀವ .ಕೆ. ಎಚ್.ಸಿ.ಸುರೇಶ್ ಪಡಾರ್, ಸಿಬ್ಬಂದಿ ಗಳಾದ ಹಾಲೇಶಪ್ಪ, ಉಸ್ಮಾನ್ ಕಾರ್ಯಚರಣೆ ನಡೆಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here