ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ದೊಂಪದ ಬಲಿ ಕ್ಷೇತ್ರದಲ್ಲಿ ಶ್ರೀ ಗುರು ಸಮಾಜ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕುರಿಯಾಳ ಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಸಭಾಧ್ಯಕ್ಷರಾಗಿದ್ದರು. ಮುಖ್ಯ ಅತಿಥಿ ಬಂಟ್ವಾಳ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಪಡು, ಅತಿಥಿಗಳಾಗಿ ನಿವೃತ ಮುಖ್ಯೋಪಾಧ್ಯಯರು ವೇದಾನಂದ ಕಾರಂತ್, ಪ್ರಶಸ್ತಿ ಪುರಸ್ಕಾರ ಸಮಾಜ ಸೇವಕ
ಜಗದೀಶ್ ಬಂಡಾರಿ ಹೊಸಮಣ್ಣು, ಪ್ರಗತಿ ಪರ ಕೃಷಿಕ ಅಲೆಕ್ಸ್ ರೋಡ್ರಿಗಸ್ ಪೊಯಿಲ, ಪಂಚ ಗ್ರಾಮ ಬಿಲ್ಲವ ಸಂಘದ ಗೌರವ ಅಧ್ಯಕ್ಷರು ತಾಚಪ್ಪ ಪೂಜಾರಿ ಸಿಮಾಸದನ, ಪ್ರಗತಿ ಪರ ಕೃಷಿಕರಾದ ಅಂಥೋನಿ ಕ್ರಾಸ್ತಾ ಕೊಂಕೋಡಿ, ವಾಸುದೇವ ರಾವು ಮಲ್ಲಿಮುಗೇರ್, ಪ್ರಸನ್ನ ಬಂಡಾರಿ ಬಳ್ಳಿ, ವಿಲಿಯಮ್ ಡಿಕೋಸ್ತಾ ಮಾಯಿಲ್ ಕೊಡಿ ಮತ್ತು ಸಂಘದ ಗೌರವ ಅಧ್ಯಕ್ಷ ಕೇಶವ ಅಮೀನ್ ಕುಕ್ಕುರಿ, ಶಾಲಾಬಾಳಿ ಸಂಘದ ಅಧ್ಯಕ್ಷ ರಾಘವ ಪೂಜಾರಿ, ಸಂಘದ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ ತೆoಡೆಮಾರ್ ಉಪಸ್ಥಿತಿದ್ದರು.

ಈ ಸಂದರ್ಭದಲ್ಲಿ ಶ್ರೀ ಗುರು ಸಮಾಜ ಸೆವಾ ಸಂಘದಿಂದ ಪ್ರಥಮ ಸಹಾಯ ಕುರಿಯಾಳ ಗ್ರಾಮದ ಪ್ರಮೀಥ್, ಇವರು ಬಹಳ ಕಷ್ಟದಲ್ಲಿದ್ದು ಅನಾರೋಗ್ಯದಲ್ಲಿದ್ದುದರಿಂದ ಅವರಿಗೆ ಪ್ರಥಮ ಸಹಾಯಧನ 10 ಸಾವಿರ ರೂಪಾಯಿ ನೀಡಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here