

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಅನ್ವಯ ಮುಂಜಾಗೃತ ಕ್ರಮವಾಗಿ ಮಂಗಳೂರಿನಲ್ಲಿ ಹೇರಿದ್ದ ನಿಷೇಧಾಜ್ಞೆ ಲೆಕ್ಕಿಸದೆ ಪ್ರತಿಭಟನಕಾರರು ಪ್ರತಿಭಟನೆ ಮಾಡಿರುವುದರ ಬಗ್ಗೆ ಪರಿಸ್ಥಿತಿ ಹಿಂಸಚಾರಕ್ಕೆ ತಿರುಗಿ ನಿಯಂತ್ರಣ ತರಲು ಪೊಲೀಸರು ಹಾರಿಸಿದ ಗಾಳಿಯಲ್ಲಿನ ಗುಂಡಿಗೆ ಇಬ್ಬರು ಬಲಿಯಾಗಲು ಮಂಗಳೂರಿನ ಜನಪ್ರತಿಯೊಬ್ಬರ ಪ್ರಚೋದನೆಯ ಮಾತುಗಳೇ ಪ್ರೇರಣೆ ನೀಡಿದೆ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.
ಭಾರತ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಸ್ಥೂಲ ಅಂಶಗಳನ್ನು ಸರಿಯಾಗಿ ಪರಿಗಣಿಸದೆ ಈ ಕಾಯಿದೆ ಕರ್ನಾಟಕದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ, ರಾಜ್ಯದಲ್ಲಿ ಜಾರಿಗೆ ಬಂದಲ್ಲಿ ರಾಜ್ಯವು ಬೆಂಕಿಯಿಂದ ಉರಿಯಲಿದೆ ಎಂದೂ ಜವಾಬ್ದಾರಿಯುತ ಜನಪ್ರತಿಯೊಬ್ಬರ ಮಾತು ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನಲೆಯಲ್ಲಿ ಸ್ಪಷ್ಟ ವಿಚಾರಗಳ ಅರಿಯದ ಮುಗ್ದ ಜನರು ಏಕಾಏಕಿ ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿ- ಪಾಸ್ತಿಗಳನ್ನು ದ್ವಂಸಗೊಳಿಸಿದ್ದಲ್ಲದೆ ಉದ್ರಿಕ್ತರಾಗಿ ಪೊಲೀಸರ ಮೇಲೆ ಮುಗಿ ಬಿದ್ದಿರುವುದರಿಂದ ಅನ್ಯಮಾರ್ಗವಿಲ್ಲದೆ ಪೊಲೀಸ್ ಕಠಿಣ ಕ್ರಮ ಜರುಗಿಸಬೇಕಾಯಿತು.
ಕಳೆದ ಎರಡು ವರ್ಷಗಳ ಹಿಂದೆ ಇಂತದ್ದೇ ಮಾತುಗಳನ್ನಾಡಿದ ಪ್ರಕರಣಕ್ಕೆ ಕೆಂಡ ಮಂಡಲವಾಗಿದ್ದ ಜಿಲ್ಲೆಯ ಬುದ್ದಿಜೀವಿಗಳು ಪ್ರಗತಿ ಪರ ಸಂಘಟನೆಗಳ ಈ ವಿಷಯದಲ್ಲಿ ನಿದ್ರಿಸಲು ಕಾರಣವೇನು? ಎಂದೂ ಸಾರ್ವಜನಿಕರಿಗೆ ಸಂಶಯ ಮೂಡಿಬರುತ್ತದೆ.
ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ನಡೆದ ನೈಜ ಘಟನೆಗಳ ಬಗ್ಗೆ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಅಣಕು ಪ್ರದರ್ಶನ ಮಾಡಿದ್ದಕ್ಕೆ ಹಿಂದೂ ಧಾರ್ಮಿಕ ಮುಖಂಡರೊಬ್ಬರ ಮೇಲೆ ಪ್ರಕರಣ ದಾಖಲಿಸುವ ಪೊಲೀಸ್ ಅಧಿಕಾರಿಗಳು, ರಾಜ್ಯ ಬೆಂಕಿಯಿಂದ ಉರಿಯಲಿದೆ ಎಂಬ ಜನಪ್ರತಿನಿಧಿಯೊಬ್ಬರ ಪ್ರಚೋದನೆಯ ಮಾತು ನಿನ್ನೆಯ ಘಟನೆ ಸಂಬಂಧಿಸಿ ಇಡೀ ಮಂಗಳೂರು ನಗರವೇ ದಿಗ್ಭ್ರಮೆಗೊಂಡಿದ್ದು ಜನ ಸಾಮಾನ್ಯರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಈ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರು ಮೌನವಾಗಿರುವುದು ನಾಗರೀಕ ಸಮಾಜಕ್ಕೆ ಅನುಮಾನ ಮೂಡಿಸುತ್ತಿದೆ. ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ದೇಶದ ಹಲವಾರು ಅಲ್ಪಸಂಖ್ಯಾತ ಮುಖಂಡರು ಸೇರಿದಂತೆ ದೆಹಲಿಯ ಪ್ರತಿಷ್ಠಿತ ಅಲ್ಪಸಂಖ್ಯಾತ ಮುಖಂಡರೊಬ್ಬರೂ ಸಹ ಈ ಕಾಯ್ದೆಯನ್ನು ಸಮರ್ಥನೆ ಮಾಡಿ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ ಎಂದು ಈಗಾಗಲೇ ಸಂದೇಶ ರವಾನಿಸಿರುತ್ತಾರೆ.
ಈ ಗಂಭೀರ ಪ್ರಕರಣ ಬಗ್ಗೆ ರಾಜ್ಯ ಸರಕಾರ ಸಮಗ್ರವಾಗಿ ತನಿಖೆ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳುಗೈದವರಿಗೆ ಕಠಿಣ ಕ್ರಮ ಜರುಗಿಸಬೇಕು. ಮತ್ತೊಮ್ಮೆ ಶಾಂತಿಯುತ ವಾತವರಣ ವೃದ್ದಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಪ್ರಯತ್ನಸಬೇಕು ಎಂದೂ ಈ ಮೂಲಕ ಪತ್ರಿಕಾ ಹೇಳಿಕೆಯ ಮೂಲಕ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.







