Wednesday, October 18, 2023

ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಚಪ್ಪರ ಮೂಹೂರ್ತ

Must read

ಬಂಟ್ವಾಳ: ಜ.11 ರಿಂದ ಜ. 18 ರವರೆಗೆ ನಡೆಯಲಿರುವ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ದ ನವೀಕರಣ ಪುನಃ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಅಂಗವಾಗಿ ಪೂರ್ವಭಾವಿ ಯಾಗಿ ಡಿ.22 ರಂದು ಆದಿತ್ಯವಾರ ಪ್ರಧಾನ ಅರ್ಚಕ ವೆಂಕಟದಾಸ್ ಭಟ್ ಅವರ ಪೌರೋಹಿತ್ಯ ದಲ್ಲಿ ವಾಸ್ತಶಿಲ್ಪಿ ದೆಚ್ಚಾರು ಗಣಪತಿ ಶೆಣ್ಯೆ ಅವರ ಹಸ್ತದಲ್ಲಿ ಚಪ್ಪರ ಮೂಹೂರ್ತ ನಡೆಯಿತು.


ಈ ಸಂದರ್ಭದಲ್ಲಿಮಾತನಾಡಿದ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು,
ಚಪ್ಪರ ಮೂರ್ತ ನಡೆದ ಬಳಿಕ ಬ್ರಹ್ಮಕಲಶೋತ್ಸವ ಮತ್ತು ಜಾತ್ರಮಹೋತ್ಸವ ವೆರೆಗೂ ನಿತ್ಯವೂ ಜಾತ್ರೆಯ ವಾತವರಣ ಇರುತ್ತದೆ. ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆಯಲು ಇಂದಿನ ಚಪ್ಪರ ಮೂರ್ತ ಸಾಕ್ಷಿಯಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಗ್ರಾಮದ ಜನರು ಹಾಗೂ ಊರಪರ ಊರ ಭಕ್ತಾದಿಗಳ ಸಹಕಾರದ ಜೊತೆಯಲ್ಲಿ ನಿರ್ವಿಘ್ನವಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ, ಎಂದು ಅವರು ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂದ ತೀರ್ಥ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಮುರಳೀದರ ಭಟ್ ಹಳೇಗೇಟು, ಗೌರವ ಸಲಹೆಗಾರ ಹರಿಶ್ಚಂದ್ರ ಭಟ್, ಆಡಳಿತ ಮೊಕ್ತೇಶರ ರಾಮಚಂದ್ರಭಟ್, ಪ್ರಮುಖರಾದ ದೇವಪ್ಪ ಕುಲಾಲ್ , ಕರುಣೇಂದ್ರ ಪೂಜಾರಿ, ರಾಮಚಂದ್ರಗೌಡ, ರಾಜೇಶ್ ನೆಕ್ಕರೆ, ಸುರೇಶ್ ಕುಲಾಲ್ ಬೀದಿ, ಮನ್ಮಥ್ ರಾಜ್ ಕಾಜವ, ಸದಾನಂದ ನಾವೂರ, ಮನೋಹರ ಹಳೇಗೇಟು, ಗ್ರಾಮ ಸಮಿತಿ ಮುಖ್ಯಸ್ಥರು, ಬ್ರಹ್ಮ ಕಲಶೋತ್ಸವ ಸಮಿತಿ ಮುಖ್ಯಸ್ಥರು, ಮಹಿಳಾ ಸಮಿತಿ ಸದಸ್ಯರು ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

More articles

Latest article