ಬಂಟ್ವಾಳ:  ರಾಷ್ಟೀಯ ಪೌರತ್ವ ಕಾಯ್ದೆ ವಿರೋಧ ಸಿ ಮಂಗಳೂರಿನ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಉಪ್ಪಿನಂಗಡಿಯಲ್ಲಿ ೨ ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ದ.ಕ.ಜಿಲ್ಲಾ ಎಸ್‌ಪಿ ಲಕ್ಷೀಪ್ರಸಾದ್ ತಿಳಿಸಿದರು.


ಶುಕ್ರವಾರ ಬಂಟ್ವಾಳ ಐಬಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುರುವಾರ ರಾತ್ರಿ ಅರ್ಕುಳದಲ್ಲಿ ವೊಲ್ವೋ ಹಾಗೂ ಕೆಎಸ್‌ಆರ್‌ಟಿಸಿ ಕೆಂಪು ಬಸ್ಸಿಗೆ ಕಲ್ಲು ಬಿದ್ದಿರುವ ಪ್ರಕರಣ ನಡೆದಿದೆ. ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳದಲ್ಲಿ ೪ ಕೆಎಸ್‌ಆರ್‌ಪಿ, ೨ ಟಿಯರ್ ಪಾರ್ಟಿ, ಚಿಕ್ಕಮಗಳೂರು ಜಿಲ್ಲೆಯಿಂದ ೫೦ ಪೊಲೀಸ್ ಸಿಬಂದಿ ಜತೆಗೆ ೪ ಮಂದಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.
ತಾನು ಬಂಟ್ವಾಳ ತಾಲೂಕಿನಲ್ಲಿ ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದು, ಕೈಕಂಬ, ಕಲ್ಲಡ್ಕ, ವಿಟ್ಲ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಪುತ್ತೂರಿನಲ್ಲಿ ಹೆಚ್ಚುವರಿ ಎಸ್‌ಪಿ ವಿಕ್ರಂ ಅಮಟೆ ಅವರು ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದರು ಎಂದರು.
ಜಿ.ಪಂ.ಸಿಇಓ ಡಾ| ಸೆಲ್ವಮಣಿ, ಬಂಟ್ವಾಳ ಎಎಸ್‌ಪಿ ಸೈದುಲ್ ಅಡಾವತ್ ಅವರು ಎಸ್‌ಪಿಯವರ ಜತೆಗಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here