ಬಂಟ್ವಾಳ: ಪದ್ಮಶಾಲಿ ದ.ಕ.ಜಿಲ್ಲಾ ಮಹಾಸಭಾ ವತಿಯಿಂದ 28ನೇ ಪದ್ಮಶಾಲಿ ಅವಿಭಜಿತ ಜಿಲ್ಲಾ ಮಟ್ಟದ ಕ್ರೀಡೋತ್ಸವ ಬಂಟ್ವಾಳ ತಾಲೂಕು ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಮೈದಾನದಲ್ಲಿ ಡಿ.22ರಂದು ಜರಗಲಿದೆ.

 


ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಗುರಿಕಾರ ಚಂದ್ರಹಾಸ ಗುರಿಕಾರ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿರುವರು. ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಜಯರಾಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ ಶೆಟ್ಟಿಗಾರ್ ಉಜಿರೆ ಧ್ವಜಾರೋಹಣ ನೆರವೇರಿಸಲಿರುವರು. ನೋಣಯ್ಯ ಶೆಟ್ಟಿಗಾರ್ ಕೊಲ ಕ್ರೀಡೋತ್ಸವಕ್ಕೆ ಚಾಲನೆ ನೀಡುವರು. ಬೆಂಗಳೂರು ಪದ್ಮಶಾಲಿ ಸಮಾಜ ಸೇವಾ ಕೂಟದ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿಗಾರ್ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಲಿರುವರು
ಸಂಜೆ ಸಮಾರೋಪದಲ್ಲಿ ಉಡುಪಿ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಓಂಪ್ರಕಾಶ್ ಡಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಲಿರುವರು. ಮುಂಬ ಪದ್ಮಶಾಳಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಾನಂದ ಎಂ.ಶೆಟ್ಟಿಗಾರ್, ಉದ್ಯಮಿ ಬಿ.ಲೋಕಯ್ಯ ಶೆಟ್ಟಿಗಾರ್, ಸಿಎ ಗಣೇಶ್ ಶೆಟ್ಟಿಗಾರ್ ಬೆಂಗಳೂರು, ಸಿಎ ಮೋಹನದಾಸ ಶೆಟ್ಟಿಗಾರ್ ಬೆಂಗಳೂರು, ಸಿಎ ಚರಣ್‌ರಾಜ್ ಶೆಟ್ಟಿಗಾರ್ ಬಹುಮಾನ ವಿತರಿಸಲಿರುವರು. ಬಸ್ರೂರು ಪದ್ಮಶಾಲಿ ಕ್ರಿಯಾ ವೇದಿಕೆ ಸ್ಥಾಪಕಾಧ್ಯಕ್ಷ ರಾಜೇಂದ್ರ ಶೆಟ್ಟಿಗಾರ್ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭದಲ್ಲಿ ಸಾಧಕರನ್ನು ಸಮ್ಮಾನಿಸಲಾಗುವುದು ಎಂದು ಸಮಿತಿ ಪ್ರಕಟನೆ ತಿಳಿಸಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here