

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ (ರಿ ) ಬೆಳ್ತಂಗಡಿ ವಲಯದ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಮುದ್ದು ಕಂದ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾಯನಕೆರೆ ಛಾಯ ಭವನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಸೌತ್ ಕೆನರಾ ಫೋಟೊಗ್ರಾಪರ್ಸ ವಿವಿದೋದ್ದೇಶ ಸಹಕಾರ ಸಂಘ ದ ನಿರ್ದೇಶಕ ಕೆ ವಸಂತ್ ಶರ್ಮ ಉಜಿರೆ, ದ.ಕ., ಉಡುಪಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಕುಮಾರ್ ಅಳದಂಗಡಿ, ಜಿಲ್ಲಾ ಮಾಜಿ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ವಲಯದ ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಸ್ವಾಗತಿಸಿ, ಮಾಧ್ಯಮ ಪ್ರತಿನಿಧಿ ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ದಾಮೋದರ್ ಗುರುವಾಯನಕೆರೆ ವಂದಿಸಿದರು.








