ಉಜಿರೆ: ವಿದ್ಯಾರ್ಥಿ ಜೀವನದಲ್ಲಿಯೇ ಎನ್‌.ಎಸ್‌.ಎಸ್ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಸಿಗುವುದರಿಂದ ತಮ್ಮ ಮುಂದಿನ ಬದುಕಿಗೆ ಬೇಕಾದ ಎಲ್ಲ ಬಗೆಯ ಶಿಕ್ಷಣವೂ ಈ ಶಿಬಿರಗಳಿಂದ ದೊರೆಯುತ್ತದೆ ಹಾಗಾಗಿ ವಿದ್ಯಾರ್ಥಿಗಳ ಪಾಲಿಗೆ ಇದೊಂದು ರೀತಿಯಲ್ಲಿ ಬಯಲು ವಿಶ್ವವಿದ್ಯಾಲಯವಿದ್ದಂತೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ. ಪಿ. ಪ್ರಸಾದ್ ಹೇಳಿದರು. ಅವರು ಇತ್ತೀಚೆಗೆ ಸ.ಹಿ.ಪ್ರಾ. ಶಾಲೆ ಸಿದ್ದಬೈಲಿನಲ್ಲಿ ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದ ಬಹುಪಾಲು ಜನಸಂಖ್ಯೆ ಯುವಶಕ್ತಿಯನ್ನು ಒಳಗೊಂಡಿದ್ದು, ಭವಿಷ್ಯದಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ಹೊಣೆ ಈ ಯುವಶಕ್ತಿಯ ಮೇಲಿದೆ. ಈ ನಿಟ್ಟಿನಲ್ಲಿ ಯುವಕರನ್ನು ತರಬೇತುಗೊಳಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳ ಪಾತ್ರ ಮಹತ್ತರವಾದುದು ಎಂದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶಶಿಧರ ಶೆಟ್ಟಿ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ ಎನ್‌.ಎಸ್‌.ಎಸ್. ನಾವೀಗ ಗಾಂಧೀಜಿಯವರ ನೂರೈವತ್ತನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಸರಕಾರವು ಯುವಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಯುವಜನತೆ ಅವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲ್ಮಂಜ ಕ್ಷೇತ್ರದ ತಾ.ಪಂ. ಸದಸ್ಯೆ ಲೀಲಾವತಿ, ಹಿರಿಯ ವಿದ್ವಾಂಸ ಕೇಶವ ಚೀಪಳೂಣ್ಕರ್, ವಿ.ವಿ. ಸಂಘ ಮುಂಡಾಜೆಯ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಗತಿಪರ ಕೃಷಿಕ ವೆಂಕಟರಮಣ ಹೆಬ್ಬಾರ್, ಮೋಹನ್ ರಾವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಿತ್ರಾ ಭಿಡೆ, ಶಾಲಾ ಮುಖ್ಯೋಪಾಧ್ಯಾಯಿನಿ ರಾಜಿ ಸಿ. ಕೆ. ಮಾತನಾಡಿ ಶುಭಹಾರೈಸಿದರು.

ಶಿಬಿರಾಧಿಕಾರಿ ಪ್ರವೀಣ್ ಸ್ವಾಗತಿಸಿ, ಅವನೀಶ್ ಪಿ. ವಂದಿಸಿದರು. ಶಿಬಿರಾರ್ಥಿ ನೀತು ಜೈನ್  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here