

ಮಂಗಳೂರು: ಕದ್ರಿ ಬಾಲ ಯಕ್ಷಕೂಟ ಕೊಡಮಾಡುವ “ಕದ್ರಿ ಯಕ್ಷ ಸಮ್ಮಾನ” ಪ್ರಶಸ್ತಿಯನ್ನು ಹಿರಿಯ ಕಲಾವಿದ, ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಅವರಿಗೆ ನೀಡಲಾಗುವುದು.
ಡಿ.21ರಂದು ಸಂಜೆ 6ರಿಂದ 7 ಗಂಟೆವರೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೇರು ಭಾಗವತ ಪಟ್ಲ ಸತೀಶ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪುರುಷೋತ್ತಮ ಭಂಡಾರಿ, ತುಳು ಅಕಾಡೆಮಿ ಸದಸ್ಯ ಲೀಲಾಕ್ಷ ಕರ್ಕೆರ ಭಾಗವಹಿಸುವರು.
ಹಾಸ್ಯ ಸಿಂಚನ: ಇದಕ್ಕೆ ಮುನ್ನ ಪ್ರಸಿದ್ಧ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರ ನೇತೃತ್ವದಲ್ಲಿ ಸಂಜೆ 4 ಗಂಟೆಯಿಂದ ಹಾಸ್ಯ ಸಿಂಚನ ನಡೆಯಲಿದೆ.
ಸಮಾರಂಭದ ಬಳಿಕ ಮಹಿಳಾ ಯಕ್ಷಕೂಟದಿಂದ ಮೇದಿನಿ ನಿರ್ಮಾಣ, ಮಹಿಷ ವಧೆ ಯಕ್ಷಗಾನ ನಡೆಯಲಿದೆ.
ಡಿ. 22ರಂದು ಕದ್ರಿ ರಾಜಾಂಗಣದಲ್ಲಿ ನಡೆಯುವ ಕದ್ರಿ ಬಾಲಯಕ್ಷಕೂಟ ಯಕ್ಷಕೂಟದ ಏಕಾದಶ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಲಿವಧೆ: ಡಿ.22ರ ಭಾನುವಾರ ಸಂಜೆ 4 ಗಂಟೆ ಯಿಂದ ಯಕ್ಷಕೂಟದ ಸದಸ್ಯರ ವಾಲಿ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬಳಿಕ ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ದುರ್ಗಾಮಕ್ಕಳ ಮೇಳ ಸ್ಥಾಪಕ, ಕಟೀಲು ದೇಗುಲದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಾಲ ಯಕ್ಷಕೂಟದ ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ, ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಭಾಗವಹಿಸುವರು.
ಈ ಸಮಾರಂಭದಲ್ಲಿ ಕದ್ರಿ ಯಕ್ಷ ಸಮ್ಮಾನ್ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಳಿಕ ಬಾಲ ಯಕ್ಷಕೂಟದವರಿಂದ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ ಎಂದು ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ ತಿಳಿಸಿದ್ದಾರೆ.







