

ಬಂಟ್ವಾಳ: 2020ನೇ ಸಾಲಿಗೆ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾಗಿ ಶ್ರೀನಿಧಿ ಭಟ್ ಟಿ.ಎನ್. ಆಯ್ಕೆಯಾಗಿದ್ದಾರೆ. ಡಿಸೆಂಬರ್ 22 ರಂದು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕಿನ ತಹಶೀಲ್ದಾರ ರಶ್ಮಿ ಎಸ್.ಆರ್., ಬಂಟ್ವಾಳ ಸರ್ಕಲ್ ಪೋಲೀಸ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್, ಜೇಸಿಐ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮತ್ತು ಪದಗ್ರಹಣ ಅಧಿಕಾರಿಯಾಗಿ ವಲಯ 15ರ ವಲಯ ಉಪಾಧ್ಯಕ್ಷ ಜೇಸಿ ಮೇಧಾವಿ ಯಂ. ಅವರು ಭಾಗವಹಿಸಲಿರುವರು.
ಪದಾಧಿಕಾರಿಗಳಾಗಿ ಶ್ರೀನಿಧಿ ಭಟ್ (ಅಧ್ಯಕ್ಷ), ಹರ್ಷರಾಜ್ ಸಿ. (ಐಪಿಪಿ), ಸುಬ್ರಹ್ಮಣ್ಯ ರಾವ್ ಪಿ. (ಕಾರ್ಯದರ್ಶಿ), ಲಕ್ಷ್ಮಣ್ (ಜತೆ ಕಾರ್ಯದರ್ಶಿ), ಖಜಾಂಚಿ ಕಿಶನ್ ಎನ್. ರಾವ್, ಉಪಾಧ್ಯಕ್ಷರುಗಳಾಗಿ ಆಶಿಕ್ ಕುಕ್ಕಾಜೆ, ಅಮಿತಾ ಹರ್ಷರಾಜ್, ಗಾಯತ್ರಿ ಲೋಕೇಶ್, ಕೃಷ್ಣರಾಜ್ ರಾವ್ ಮತ್ತು ನರಸಿಂಹ ಮಯ್ಯ, ಮಲ್ಲಿಕಾ ಆಳ್ವ (ಜೇಸಿರೆಟ್ ಅಧ್ಯಕ್ಷೆ), ಅಭಿಷೇಕ್ (ಜೇಜೇಸಿ ಅಧ್ಯಕ್ಷ), ಜಯರಾಜ್ ಎಸ್. ಬಂಗೇರ, ಧೀರಜ್ ಹೆಚ್., ಹರಿಶ್ವಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ಶೈಲಜಾ ರಾಜೇಶ್ ಹಾಗೂ ಹರಿಪ್ರಸಾದ್ ಕುಲಾಲ್ (ನಿರ್ದೇಶಕರು) ಆಯ್ಕೆಗೊಂಡಿದ್ದಾರೆ ಎಂದು ಜೇಸಿ ಅಧ್ಯಕ್ಷ ಹರ್ಷರಾಜ್ ಸಿ. ತಿಳಿಸಿದ್ದಾರೆ







