ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಜೀರ್ ಮಲ್ಲಿ ಮಖ್ಯರಸ್ತೆಯಿಂದ ಕೊಡಂಗೆ ರಸ್ತೆಯ ಕಾಮಗಾರಿಗೆ ಬುಧವಾರ ಮಲ್ಲಿ ಎಂಬಲ್ಲಿ ಚಾಲನೆ ನೀಡಲಾಯಿತು. ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾಮಗಾರಿಗೆ ಚಾಲನೆ ನೀಡಿ‌ ಮಾತನಾಡಿ, ಈ ಭಾಗದ ಪ್ರದೇಶದಲ್ಲಿ ಸುಮಾರು 30 ಮನೆಗಳಿದ್ದು, ಮುಖ್ಯ ರಸ್ತೆಗೆ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಈ ಭಾಗದ ಜನರು ಪೇಟೆಗೆ ಬರಬೇಕಾದರೆ ಗುಡ್ಡ ಹತ್ತಿ ಬರುವ ಪರಿಸ್ಥತಿ ಎದುರಾಗಿದೆ. ಇಲ್ಲಿಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಗ್ರಾ.ಪಂ. ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಗುಡ್ಡವನ್ನು ಜರಿದು ನೆಲಸಮ ಮಾಡುವ ಮೂಲಕ‌ ಮೊದಲ ಹಂತದ ಕಾಮಗಾರಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಕೆಲ ಜಾಗವನ್ನು ಬಿಟ್ಟುಕೊಡುವ ಸಹಕಾರ ಮಾಡಿದ್ದಾರೆ. ಕಾಂಕ್ರಿಟ್ ರಸ್ತೆ, ಒಳಚರಂಡಿ, ಆವರಣ ಗೋಡೆ, ತಡೆಗೋಡೆಗೆ ಸುಮಾರು 1 ಕೋಟಿ ರೂ. ಅನುದಾನ ಬೇಕಾಗಬಹುದು. ಶಾಸಕ ಯು.ಟಿ.ಖಾದರ್ ಈ ಬಗ್ಗೆ ಮನವಿ ಮಾಡಿದ್ದು, ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಅದಲ್ಲದೆ, ಗ್ರಾ.ಪಂ.ನಿಂದ ಅನುದಾನ ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.


ಮಾಜಿ ಜಿ.ಪಂ. ಸದಸ್ಯ ಉಮರ್ ಫಾರೂಕ್, ಮಲ್ಲಿಯಿಂದ ಕೊಡಂಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಕೇವಲ ಪಂಚಾಯತ್ ಅನುದಾನದಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಹೆಚ್ವಿನ ಅನುದಾನ ಬೇಕಾಗಿದ್ದು, ಗ್ರಾ.ಪಂ. ನಿಯೋಗವು ಶಾಸಕರನ್ನು ಭೇಟಿಯಾಗಿ ಈ ಭಾಗದ ಜನರ ಸಮಸ್ಯೆಯನ್ನು ಮನದಟ್ಟು ಮಾಡಲಾಗಿದೆ. ಕಾಮಗಾರಿಯನ್ನು ಆರಂಭ ಮಾಡುವಂತೆ ಶಾಸಕರು ತಿಳಿಸಿದ್ದಾರೆ. ಶೀಘ್ರ ಅನುದಾನ ಬಿಡುಗಡೆಯಾಗುವ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಪುದು ಗ್ರಾ.ಪಂ. ಲಿಡಿಯ ಪಿಂಟೋ, ಸ್ಥಳಿಯ ಗ್ರಾ.ಪಂ. ಸದಸ್ಯ ಇಕ್ಬಾಲ್ ಸುಜೀರ್, ಮುಮ್ತಾಝ್, ಕಿಶೋರ್ ಸುಜೀರ್, ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಸ್ಥಳೀಯರಾದ ನರೇಂದ್ರ ನಾಯ್ಕ್, ಅಶ್ರಫ್ ಮಲ್ಲಿ, ನಿಸಾರ್ ವಳವೂರು, ಬಶೀರ್ ತಂಡೇಲು, ಇಬ್ರಾಹಿಂ ವಳವೂರು, ಸುರೇಶ್ ನೆತ್ತರಕೆರೆ, ಸಲಾಂ ಮಲ್ಲಿ, ಮಜೀದ್ ಪೆರಿಮಾರ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here