

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಮೈಲುಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪ ಮಂಗಳವಾರ ತಡರಾತ್ರಿ ನಡೆದಿದೆ.
ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ದಿ.ಹಸನಬ್ಬ ಎಂಬವರ ಪುತ್ರರಾದ ಝುಬೈರ್, ಶರೀಫ್, ಸಿರಾಜ್, ವಳವೂರಿನ ಅರಬನಗುಡ್ಡೆಯ ನಿವಾಸಿ, ಹಸನಬ್ಬ ಎಂಬವರ ಪುತ್ರರಾದ ಮುಸ್ತಫಾ, ಆಸಿಫ್ ಗಾಯಗೊಂಡವರು ಎಂದು ತಿಳಿದುಬಂದಿದೆ.
ಇವರೆಲ್ಲರು ಎಸ್ಕೆಎಸ್ಸೆಸ್ಸೆಫ್ ತಲಪಾಡಿ ಘಟಕದ ಕಾರ್ಯಕರ್ತರಾಗಿದ್ದು, ಸಮಸ್ತ ಸಮ್ಮೇಳನಕ್ಕೆಂದು ತಮ್ಮ ಕಾರಿನಲ್ಲಿ ಮಂಗಳವಾರ ಮಡಿಕೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿದಿ ರಾತ್ರಿ ಹಿಂದಿರುಗುವ ವೇಳೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಇಲ್ಲಿನ ಮೈಲುಗಲ್ಲುವೊಂದಕ್ಕೆ ಢಿಕ್ಕಿ ಹೊಡೆದು, ಉರುಳಿದೆ.
ಅಪಘಾತದ ತೀವ್ರತೆಗೆ ಸಿರಾಜ್ ಎಂಬವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರಾದ ಝುಬೈರ್, ಸಿರಾಜ್, ಮುಸ್ತಫಾ, ಆಸಿಫ್ ಗಾಯಗೊಂಡಿದ್ದು, ಇವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೆಚ್ಚಿನ ಮಾಹಿತಿ ಪೊಲೀಸರಿಂದ ಬರಬೇಕಾಗಿದೆ.








