ಕುಂದಾಪುರದ UVA ಮೆರಿಡಿಯನ್ ಒಪೆರ ಪಾರ್ಕ್ ಕೋಟೇಶ್ವರ ನಡೆದ ವಲಯಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಜೇಸಿ ವಲಯ 15ರ ವಲಯದ ವ್ಯವಹಾರ ವಿಭಾಗದ ನಿರ್ದೇಶಕರಾಗಿ ಜೇಸಿ ರಾಜೇಶ್ ಪಿ ಪುಂಜಾಲಕಟ್ಟೆ ಪ್ರಮಾಣ ವಚನ ಸ್ವೀಕರಿಸಿದರು .
ಇವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ ) ಪುಂಜಾಲಕಟ್ಟೆ ಇದರ ಸಂಘಟನಾ ಸಂಚಾಲಕರು ಶ್ರೀ ಮುರುಘೇoದ್ರ ಮಿತ್ರ ಮಂಡಳಿ (ರಿ ) ಪುಂಜಾಲಕಟ್ಟೆ ಇದರ ಸಕ್ರಿಯ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದ ಅನುಭವ ಇವರದ್ದು .ಜೇಸಿಐ ಮಡಂತ್ಯಾರ್ ನ 2017ರ ಯಶಸ್ವಿ ಅಧ್ಯಕರಾಗಿ ಸೇವೆ ಸಲ್ಲಿಸಿದವರು . 2019 ರಲ್ಲಿ ಉತ್ತರ ಕನ್ನಡ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿ ಒಳಗೆ ಎಲ್ಲಾ ಜೇಸಿ ಸದಸ್ಯರ ಸಂಪರ್ಕವನ್ನು ಸಾದಿಸುವ ವಲಯದ ಉದಕಪತ್ರಿಕೆಯ ಪ್ರಧಾನ ಸಂಪಾದಕರಾಗಿ ದುಡಿದ ಅನುಭವ.ಪ್ರಸುತ ವಲಯದ ವ್ಯವಹಾರದ ವಿಭಾಗದ ನಿರ್ದೇಶಕರಾಗಿ ಆಯ್ಕೆ ಆಗಿರುವುದು ಜೇಸಿಐ ಮಡಂತ್ಯಾರ್ ಘಟಕಕ್ಕೆ ಸಂದ ಗೌರವಾಗಿರುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here