ಉಜಿರೆ: ಬೆಳ್ತಂಗಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ಎಸ್.ಡಿ.ಎಮ್. ಕಲಾಭವನದಲ್ಲಿ ನಡೆದ ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯಲ್ಲಿ 108 ತಂಡಗಳು ಭಾಗವಹಿಸಿದ್ದು, ಹಿರಿಯರ ವಿಭಾಗದಲ್ಲಿ ಏಳು ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ ಐದು ತಂಡಗಳು ಧಾರವಾಡದಲ್ಲಿ 2020 ರಜನವರಿ 4 ಮತ್ತು 5 ರಂದು ನಡೆಯುವ ರಾಜ್ಯ ಮಟ್ಟದ ಜಿನಭಜನೆ ಹಾಡುವ ಸ್ಪರ್ಧೆಗೆ ಆಯ್ಕೆಯಾಗಿದೆ.
ಹಿರಿಯರ ವಿಭಾಗ: ಶುಕ್ಲತಂಡ, ಉಜಿರೆ
ಚಂದ್ರನಾಥ ಭಜನಾ ಮಂಡಳಿ, ರೆಂಜಾಳ, ಕಾರ್ಕಳ ತಾಲೂಕು
ಶ್ರುತತಂಡ, ಉಜಿರೆ
ಶ್ರೀ ಗೋಮಟೇಶ್ವರ ಭಜನಾತಂಡ, ಮಂಗಳೂರು
ಶ್ರೀ ಬಾಹುಬಲಿ ಸೇವಾ ಸಮಿತಿ, ಧರ್ಮಸ್ಥಳ
ಅಗ್ನಿಲಾತಂಡ, ಬಜಗೋಳಿ, ಕಾರ್ಕಳ ತಾಲೂಕು
ರತ್ನತ್ರಯತಂಡ, ಮೂಡಬಿದ್ರೆ
ಕಿರಿಯರ ವಿಭಾಗ: 
ವಿದುಷಾ, ಉಜಿರೆ
ಸಿದ್ದೇಭ್ಯ, ಕಾರ್ಕಳ
ಜ್ಞಾನ ಸುಧಾ, ಹೊರನಾಡು
ಜಯಧವಳ ಸಂಘ, ಮೂಡಬಿದ್ರೆ
ಸಂಸ್ಕಾರತಂಡ, ಮಂಗಳೂರು
ಪ್ರೋತ್ಸಾಹಕ ಬಹುಮಾನ : ಅನಂತಶ್ರೀ ಕಿರಿಯರತಂಡ, ನಾರಾವಿ
ಬೆಂಗಳೂರಿನ ನಾಟ್ಯಾಲಯ ನಿರ್ದೇಶಕ ಅಶೋಕ್‌ಕುಮಾರ್, ಪೂಜಾ ಎಮ್.ಮತ್ತು ನಿಶ್ವಲ್ ವಿಶ್ವಸೇನ ತೀರ್ಪುಗಾರರಾಗಿ ಸಹಕರಿಸಿದರು.
ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರಕುಮಾರ್ ಬಹುಮಾನ ವಿತರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here