ಆಗಾಗ
ಹೃದಯ ಡ್ಯಾಮೇಜ್ ಆಗುತ್ತೆ.
ಕಾಮಗಾರಿ
ನಡೆಯುತ್ತಿರುತ್ತದೆ…!

ನೋಟಕ್ಕೆ ಮರುಳಾಗಿ
ನಗೆ ಚೆಲ್ಲಿ
ಮಾತಲ್ಲೇ ಮೋಡಿ ಮಾಡಿ
ಸ್ನೇಹ ಕೂಡಿ
ಕನಸಲೆಲ್ಲ ಕಾಡಿ
ಪ್ರೀತಿ ವಿನಿಮಯಾಗಿ
ಪ್ರೇಮಿಗಳಾಗಿ ಬಿಟ್ಟೆವು
ಕೆಲವೇ ದಿನಗಳಲ್ಲಿ..!

ಪಾರ್ಕ್, ಬೀಚ್
ಶಾಪಿಂಗ್ ಮಾಲ್..
ಕೈ ಹಿಡಿದು ಸುತ್ತಿ
ಮೈ ತಾಗಿಸಿ ನಡೆದು
ಅಲ್ಲೆಲ್ಲೊ ಮರೆಯಲ್ಲಿ ಮುತ್ತಿಟ್ಟು
ಇನ್ನೆಲ್ಲೋ ತಬ್ಬಿ
ಜಗವನ್ನೇ ಸ್ವರ್ಗ ಮಾಡಿ
ನನಗೆ ನೀನು ನಿನಗೆ ನಾನು
ಸುಖ ದುಃಖ ಕ್ಕೆ ಸಂಜೀವಿನಿ.,
ಕುಣಿದಾಡಿದ್ದೆವು
ಮೈ ಮರೆತು ಜೀವನದಲ್ಲಿ..

ಉಳಿದದ್ದು ಏನಿಲ್ಲ..
ಸಾಕಾಯಿತು ಈ ಪ್ರೀತಿಯಾಟ
ಈಗ ನಿಲ್ಲಿಸಲು ಪರದಾಟ
ಆಗಾಗ ಕೋಪ,ಜಗಳ.
ಮಾತಿಲ್ಲ ಕಥೆಯಿಲ್ಲ.
ಕೊನೆಗೊಮ್ಮೆ ಮುಗಿದು ಬಿಟ್ಟಿತ್ತು.
ಅವಳ್ಯಾರೋ ನಾನ್ಯಾರೋ.!

ಈಗ ಹೃದಯದಲ್ಲಿ
ಕಾಮಗಾರಿ ನಡೆಯುತ್ತಿದೆ.
ಡ್ಯಾಮೇಜ್ ಆದ ಜಾಗ ಫಿಲ್ ಮಾಡಿ
ಹೊಸ ರಸ್ತೆ ನಿರ್ಮಿಸಬೇಕು.
ಮತ್ತೆ ಯಾರನ್ನಾದರು ಪ್ರೇಮ ಪಲ್ಲಕ್ಕಿಯಲ್ಲಿ ಕೂರಿಸಿ
ಮೆರವಣಿಗೆ ಮಾಡಬೇಕು..!

ಜೊತೆಗೆ..,
ಪ್ರೀತಿಯ ಹೆಸರಲ್ಲಿ
ಮೈ ಬಿಸಿಯಾಗಿಸಬೇಕು.
‘ಕಾಮಗಾರಿ ಪ್ರಗತಿಯಲ್ಲಿದೆ’..!

✍ಯತೀಶ್‌ ಕಾಮಾಜೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here