Friday, October 27, 2023

ಆರ್ಯುವೇದ ಔಷಧೀಯ ಗುಣಗಳಿರುವ ಆಹಾರ ಸೇವಿಸಿ, ಆರೋಗ್ಯ ವೃದ್ದಿಸಿ: ಚಂದ್ರಹಾಸ ಕರ್ಕೇರ

Must read

ಬಂಟ್ವಾಳ: ಆರ್ಯುವೇದ ಔಷಧೀಯ ಗುಣಗಳಿರುವ ಆಹಾರವನ್ನು ಸೇವಿಸಿದಾಗ ಆರೋಗ್ಯ ರಕ್ಷಣೆ ಪಡೆಯಲು ಸಾಧ್ಯ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು. ಬಿ.ಸಿ.ರೋಡು ತಾ.ಪಂ.ನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ದ.ಕ‌. ಜಿಲ್ಲಾ ಪಂ. ಮತ್ತು ಆಯುಷ್ ಇಲಾಖೆ ವತಿಯಿಂದ ನಡೆದ ಆಯುಷ್ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ಹೇಳಿದರು. ‌ಆಯುಷ್ ಪದ್ದತಿಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆದುಕೊಂಡು ಹೆಚ್ಚುಹೆಚ್ಚು ಆಯುಷ್ ನ ವಸ್ತುಗಳನ್ನು ದಿನ ಬಳಕೆ ಮಾಡುವಂತೆ ಅವರು ತಿಳಿಸಿದರು. ಆಯುಷ್ ಇಲಾಖೆಯಲ್ಲಿನ ಕಾರ್ಯಕ್ರಮಗಳು, ಸವಲತ್ತುಗಳು, ಯೋಜನೆಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಮಾಹಿತಿ ಇಲ್ಲ ಹಾಗಾಗಿ ಈ ಮಾಹಿತಿಯನ್ನು ಅಂಗನವಾಡಿಯ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಲ್ಲಿ ಮಾಹಿತಿ ನೀಡಿ ಪ್ರಯೋಜನ ಪಡೆಯಲು ಇಲಾಖೆಗೆ ಶಕ್ತಿ ನೀಡುವಂತೆ ಹೇಳಿದರು.
ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಆಯುಷ್ ಪದ್ದತಿಯನ್ನು ಅನುಸರಿಸಿ, ಆಯುಷ್ಯ ಜಾಸ್ತಿ ಮಾಡಲು, ಹೆಚ್ಚು ಆರೋಗ್ಯವಂತರಾಲು ಸಾಧ್ಯ ಎಂದು ಅವರು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಹಿರಿಯ ಮೇಲ್ವಿಚಾರಕಿ ಭಾರತಿ ಕುಂದರ್, ಮೇಲ್ವಿಚಾರಕಿ ಗುಣವತಿ, ಸಂಪನ್ನೂಲ ವ್ಯಕ್ತಿಗಳಾದ ಡಾ. ಅಜಿತ್ ನಾಥ್ ಇಂದ್ರ, ವಸುದಾ ಜೈನ್, ಡಾ. ಶಿವಪ್ರಸಾದ್ ಶೆಟ್ಟಿ, ಇಲಾಖೆಯ ಸಿಬ್ಬಂದಿಗಳಾದ ಲಿಂಗಪ್ಪ, ಪ್ರವೀಣ್ ಕುಮಾರ್, ನಿತೇಶ್ ಉಪಸ್ಥಿತರಿದ್ದರು.

ಅಯುಷ್ ವೈದ್ಯಾಧಿಕಾರಿ ಡಾ. ಮಣಿಕಾರ್ಣಿಕ ಸ್ವಾಗತಿಸಿ, ವಂದಿಸಿದರು. ಶುಶ್ರೂಕಿ ಸುನಂದ ಕಾರ್ಯಕ್ರಮ ನಿರೂಪಿಸಿದರು.

 

More articles

Latest article