


ಬಂಟ್ವಾಳ : ಸಜ್ಜನ ಸರಣಿಯ ಶೃಂಖಲೆ ಹೊಂದಿರುವ ಧಾರ್ಮಿಕ ಪಂಡಿತರನ್ನೊಳಗೊಂಡ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಅಧೀನದಲ್ಲಿರುವ ಎಸ್ಕೆಎಸ್ಸೆಸ್ಸೆಫ್ ಹಮ್ಮಿಕೊಳ್ಳುವ ಕಾರ್ಯಕ್ರಮಗಳೆಲ್ಲವೂ ಸಮಾಜಮುಖಿಯಾಗಿದ್ದು, ಸರ್ವರೂ ಇದರೊಂದಿಗೆ ಕೈಜೋಡಿಸಿ ಕೃತಾರ್ಥರಾಗಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ಮುಖಂಡ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ 6ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರಿನ ಮರ್ಹೂಂ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ದ್ವಿಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅನುಸ್ಮರಣಾ ಭಾಷಣಗೈದರು.
ಶಾಖಾಧ್ಯಕ್ಷ ಹಾಜಿ ಅಬೂಬಕ್ಕರ್ ಎನ್.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನ್ವರ್ ಸ್ವಾದಿಕ್ ಉದ್ಘಾಟಿಸಿದರು. ಅಬ್ದುಲ್ಲಾ ರಬ್ಬಾನಿ ಮಜ್ಲಿಸುನ್ನೂರ್ ನೇತೃತ್ವ ವಹಿಸಿದ್ದರು. ಅಬ್ದುಲ್ ಖಾದರ್ ಮದನಿ, ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಪಿ.ಬಿ. ಹಾಮದ್ ಹಾಜಿ ಬಂಗ್ಲೆಗುಡ್ಡೆ, ಅಬ್ದುಲ್ ಅಝೀಝ್ ಪಿ.ಐ., ಮಜೀದ್ ಬೋಳಂಗಡಿ, ಬಶೀರ್ ಕೆ4, ಎನ್. ಬಶೀರ್, ಹನೀಫ್ ಹಾಸ್ಕೊ, ಮುಹಮ್ಮದ್ ಶಫೀಕ್, ಸಲಾಂ ಸೆಂಟ್ರಿಂಗ್, ಇಸಾಕ್ ಫೇಶನ್ವೇರ್, ರಫೀಕ್ ಇನೋಳಿ, ಸಿ.ಪಿ. ಶಾಕಿರ್, ಖಾದರ್ ಪೈಂಟರ್, ಜಬ್ಬಾರ್ ಬುರ್ಖಾ, ಇಲ್ಯಾಸ್ ಬೋಗೋಡಿ, ಹನೀಫ್ ಬಂಗ್ಲೆಗುಡ್ಡೆ, ಹನೀಫ್ ಡ್ರೈಫಿಶ್ ಬೋಗೋಡಿ, ಮುಹಮ್ಮದ್ ಬಂಗ್ಲೆಗುಡ್ಡೆ, ಪಿ.ಬಿ. ಸಲಾಂ ಹಾಜಿ ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಖಲೀಲ್ ದಾರಿಮಿ ಸ್ವಾಗತಿಸಿ, ಹನೀಫ್ ಯಮಾನಿ ವಂದಿಸಿದರು.







