

ಬಂಟ್ವಾಳ : ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ನೀರಿನ ಬಾಟಲ್(ಮಿನರಲ್ ವಾಟರ್) ಮಾರಾಟ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಬೆಳ್ತಂಗಡಿ ತಾಲೂಕಿನಲ್ಲಿ ಹುಟ್ಟಿಕೊಂಡಿರುವ ರಾಜಕೇಸರಿ ಸಂಘಟನೆಯು ರವಿವಾರ ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ನೀರಿನ ಬಾಟಲ್ ಮಾರಾಟ ಅಭಿಯಾನ ನಡೆಸಿತು.
ರಾಜಕೇಸರಿ ದ.ಕ.ಜಿಲ್ಲಾ ಘಟಕ ಹಾಗೂ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಬಸವನಬೆÊಲು ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ ಅವರು ಚಾಲನೆ ನೀಡಿ ಶುಭಹಾರೈಸಿದರು.
ರಾಜಕೇಸರಿಯ ಸಂಸ್ಥಾಪಕ ದೀಪಕ್ ಜಿ. ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಬಂಟ್ವಾಳ ತಾಲೂಕಿನ ರುಕ್ಮಯ್ಯ ನಾಯ್ಕ್ ಅವರ ಪುತ್ರಿ ಚೈತ್ರಾ ಅವರು ನರದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಶಸ್ತçಚಿಕಿತ್ಸೆಗೆ ನೆರವಾಗಲು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಾಲಕಿಯ ಪೋಷಕರಿಗೆ ೨೫,೫೦೦ ರೂ.ಗಳನ್ನು ಹಸ್ತಾಂತರಿಸಲಾಯಿತು.
ಬಿ.ಸಿ.ರೋಡು ರಕ್ತೇಶ್ವರಿ ಸನ್ನಿಽ ಕ್ಷೇತ್ರದ ರಾಜೇಶ್ ನಾಯ್ಕ್, ಖಾಸಗಿ ಬಸ್ ಏಜೆಂಟರಾದ ಗಂಗಾಧರ್ ಕೋಟ್ಯಾನ್, ದಿನೇಶ್, ಘಟಕದ ಸಂಚಾಲಕ ಸಂದೇಶ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಜಿಲ್ಲಾ ಸಂಚಾಲಕ ಲೋಕೇಶ್ ಶಬರಬÉÊಲು, ದಿಡುಪೆ ಸಂಚಾಲಕ ಸಂಪತ್ತ್ ಮೊದಲಾದವರು ಭಾಗವಹಿಸಿದ್ದರು.








